ದಾರುಲ್ ಇರ್ಶಾದ್ ಯು.ಎ.ಇ ರಾಷ್ಟ್ರೀಯ ಸಮಿತಿ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ
ದುಬೈ: ಮಾಣಿ ದಾರುಲ್ ಇರ್ಶಾದ್ ವಿದ್ಯಾಸಂಸ್ಥೆಯ ಯು.ಎ.ಇ ರಾಷ್ಟ್ರೀಯ ಸಮಿತಿಯ ಮಹಾಸಭೆಯು ಇತ್ತೀಚೆಗೆ ದುಬೈನ ಕೆಸಿಎಫ್ ಸೆಂಟರ್ ನಲ್ಲಿ ಜರುಗಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ದಾರುಲ್ ಇರ್ಶಾದ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ಲಾ ಹಾಜಿ ನಲ್ಕ ವಹಿಸಿದ್ದರು.
ಮಾಣಿ ದಾರುಲ್ ಇರ್ಶಾದ್ ಅಧ್ಯಕ್ಷ ಶೈಖುನಾ ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಮುಖ್ಯ ಅತಿಥಿಗಳಾಗಿದ್ದರು. ಕೆಸಿಎಫ್ ಅಂತರಾಷ್ಟ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಜಿ ಶೇಖ್ ಬಾವಾ ಉಪಸ್ಥಿತರಿದ್ದರು. ದಾರುಲ್ ಇರ್ಶಾದ್ ‘ಬೆಳ್ಳಿ ಭವನ’ದ ಉದ್ಘಾಟನಾ ಸಮಾರಂಭದ ಅಂಗವಾಗಿ ಹತ್ತು ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲು ತೀರ್ಮಾನಿಸಲಾಯಿತು.
ನೂತನ ಸಾಲಿನ ಅಧ್ಯಕ್ಷರಾಗಿ ಮುಹಮ್ಮದ್ ಅಲಿ ವಳವೂರು, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕೊಲ್ನಾಡ್, ಕೋಶಾಧಿಕಾರಿ ಇಬ್ರಾಹಿಂ ಬ್ರೈಟ್ ಮಾರ್ಬಲ್ ಆಯ್ಕೆಯಾದರು. ಅಶ್ರಫ್ ಹಾಜಿ ಅಡ್ಯಾರ್, ರಝಾಖ್ ಹಾಜಿ, ಅಬ್ದುಲ್ ರಝಾಖ್ ಹಾಜಿ ಜಲ್ಲಿ ಉಪಾಧ್ಯಕ್ಷರುಗಳಾಗಿ, ಅಬ್ದುಲ್ ರಶೀದ್ ಕೈಕಂಬ, ಅಬ್ದುಲ್ ಖಾದರ್ ಸಾಲೆತ್ತೂರು, ಶಾಫಿ ಪೆರುವಾಯಿ ಜೊತೆ ಕಾರ್ಯದರ್ಶಿಗಳಾಗಿ ಆಯ್ಕೆಯಾದರು. ದಾರುಲ್ ಇರ್ಶಾದ್ ಪ್ರತಿನಿಧಿ ಅಬ್ದುಲ್ ಅಝೀಝ್ ಲತೀಫಿ ಕಾರ್ಯಕ್ರಮ ನಿರೂಪಿಸಿದರು.