Published On: Fri, Feb 24th, 2023

ದುಬೈಯಲ್ಲಿ ಮಾರ್ಚ್ 19 ರಂದು “ಶಿವದೂತೆ ಗುಳಿಗೆ” ಪ್ರದರ್ಶನ.

ದುಬೈ: ದುಬಾಯಿಯ ಅಲ್ ನಾಸರ್ ಲಿಸರ್ ಲ್ಯಾಂಡ್ ಐಸ್ ರಿಂಕ್, ಕರಾಮ ಅಡಿಟೋರಿಯಂನಲ್ಲಿ ವಿಜಯ ಕುಮಾರ್ ಕೊಡಿಯಾಲಬೈಲ್ ರವರ ನಿರ್ದೇಶನದ ಅಪರೂಪದ ತುಳು ನಾಟಕದ ಕ್ಷಣಗಣನೆ ಆರಂಭ-ವ್ಯವಸ್ಥಿತ ತಯಾರಿ.ದಾಖಲೆ ಸಂಖ್ಯೆಯಲ್ಲಿ ಪ್ರೇಕ್ಷಕರು ನೋಡಿಆನಂದಿಸಿದ “ಶಿವದೂತೆ ಗುಳಿಗೆ” ಮಾ.19 ರಂದುನಡೆಯಲಿರುವ ಕಲಾ ಸಂಗಮ ಮಂಗಳೂರು ಸಾದರ ಪಡಿಸುವ ನಾಟಕ ಪ್ರದರ್ಶನದ ಆಮಂತ್ರಣ ಪತ್ರ – ಪ್ರವೇಶ ಪತ್ರ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮವನ್ನು ಚಿತ್ರ ನಿರ್ಮಾಪಕ ಆತ್ಮನಂದ ರೈ,ಸಂಘಟಕರಾದ ನೊವೆಲ್ ಅಲ್ಮೇಡಾ,ದಯಾ ಕಿರೋಡಿಯಾನ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಿಡುಗಡೆ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿಗಳು, ಕಲಾಪೋಷಕರು, ಕಲಾವಿದರ ಸಮ್ಮುಖದಲ್ಲಿ ದುಬಾಯಿ-ಗೀಸೈಸ್‍ನ ಫಾರ್ಚೂನ್ ಫ್ಲಾಝದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು.

ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್‌ ನ ಮಾಲಕರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಬಿಲ್ಲವಾಸ್ ದುಬೈಯ ಅಧ್ಯಕ್ಷರಾದ ಪ್ರಭಾಕರ ಸುವರ್ಣ,ಬಿಲ್ಲವಾಸ್ ನ ಸತೀಶ್ ಪೂಜಾರಿ,ಕನ್ನಡ ಪಾಠ ಶಾಲೆ ದುಬೈಯ ಶಶಿಧರ್ ನಾಗರಾಜಪ್ಪ,ಮೊಗವೀರ್ಸ್ ಸಮಾಜದ ಬಾಲಕೃಷ್ಣ ಸಾಲಿಯಾನ್,ಉದ್ಯಮಿಗಳಾದ ಗುಣಶೀಲ್ ಶೆಟ್ಟಿ, ಪ್ರೇಮನಾಥ ಶೆಟ್ಟಿ,ಹರೀಶ್ ಬಂಗೆರ, ಪದ್ಮಶಾಲಿ ಸಮಾಜದ ಧನಂಜಯ ಶೆಟ್ಟಿಗಾರ್,ಅಲ್ ಫರ್ದಾನ್ ಎಕ್ಸೆಂಜ್ ನ ಸಿಇಓ ತಾರನಾಥ ರೈ ಉಪಸ್ಥಿತರಿದ್ದರು.

ಮಧ್ಯಾಹ್ನದ ಬಳಿಕ 2.30 ಕ್ಕೆ ಮತ್ತು ಸಂಜೆ 6 ಗಂಟೆಗೆ ಪ್ರದರ್ಶವಾಗುವ “ಶಿವದೂತೆ ಗುಳಿಗೆ” ನಾಟಕದ ಟಿಕೆಟ್ ಗಳನ್ನು ಗಣ್ಯರು ಬಿಡುಗಡೆ ಗೊಳಿಸಿ ತುಳುನಾಡಿನ ದೈವ ದೇವರುಗಳ ಕಥೆಯನ್ನು ಒಳಗೊಂಡ ಈ ನಾಟಕವನ್ನು ಯುಎಇಯಲ್ಲಿ ಇರುವ ಎಲ್ಲಾ ತುಳು  ಕನ್ನಡಿಗರು ನೋಡಲೇಬೇಕು. ವಿಶೇಷವಾಗಿ ಈ ನಾಟಕವನ್ನು ನಮ್ಮ ಮಕ್ಕಳಿಗೆ ತೋರಿಸಿ ನಮ್ಮ ತುಳುನಾಡ ಸಂಸ್ಕೃತಿಯನ್ನು ಉಳಿಸುವಂತಹ ಪ್ರಯತ್ನ ಆಗಬೇಕು ಎಂದರು. ಈಗಾಗಲೇ ಕರ್ನಾಟಕ, ಮುಂಬೈ ಮತ್ತು ಕೇರಳದ ಗಡಿನಾಡಿನಲ್ಲಿ 400 ಕ್ಕೂ ಅಧಿಕ ಪ್ರದರ್ಶನಗೊಂಡ ಈ ನಾಟಕವನ್ನು ದುಬೈನಲ್ಲಿ ಹೌಸ್ ಫುಲ್ ಪ್ರದರ್ಶನಗೊಳ್ಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಮಾತನಾಡಿ ನಾಟಕಕ್ಕೆ ಶುಭ ಹಾರೈಸಿದರು.

ಮಂಗಳೂರಿನ ಪ್ರಸಿದ್ಧ ನಾಟಕ ತಂಡ ಕಲಾಸಂಗಮದ ಸುಮಾರು 28 ಕಲಾವಿದರು ಶ್ರೀ ವಿಜಯ್ ಕುಮಾರ್ ಕೊಡಿಯಾಲಬೈಲ್ ರವರ ಧಕ್ಷ ನಿರ್ದೇಶನದಲ್ಲಿ ಮಾರ್ಚ್ 18ರಂದು ದುಬೈ ಸೇರಲಿದ್ದು, ಕಾಂತಾರ ಚಲನಚಿತ್ರ ಗುರುವ ಖ್ಯಾತಿಯ ಸ್ವರಾಜ್ ಶೆಟ್ಟಿ ಗುಳಿಗನ ಪಾತ್ರದಲ್ಲಿ ಮಿಂಚಲಿದ್ದಾರೆ.

ನಾಟಕ ಸಂಘಟಕರಾದ ಹರೀಶ್ ಬಂಗೆರ,ದಿನೇಶ್ ಶೆಟ್ಟಿ ಕೊಟ್ಟಿಂಜ,ರಾಜೇಶ್ ಕುತ್ತಾರ್, ಗಿರೀಶ್ ನಾರಾಯಣ್,ಪ್ರಕಾಶ್ ಪಕ್ಕಳ,ಶಾನ್ ಪೂಜಾರಿ ನೆರೆದ ಗಣ್ಯರನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು. 

ಗಿರೀಶ್ ನಾರಾಯಣ್ ಶಿವದೂತೆ ಗುಳಿಗೆ ನಾಟಕದ ಯಶಸ್ವಿ ಪ್ರದರ್ಶನಗಳ ಮಾಹಿತಿಯನ್ನು ನೀಡಿದರೆ, ರಾಜೇಶ್ ಕುತ್ತಾರ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

2,500 ಆಸನಗಳಿರುವ ಈ ಸಭಾಂಗಣದಲ್ಲಿ ಎರಡು ಪ್ರದರ್ಶನದಲ್ಲಿ 5,000 ಮಂದಿ ತುಳು – ಕನ್ನಡಿಗರು ಈ ನಾಟಕವನ್ನು ನೋಡಲಿದ್ದು ಈಗಾಗಲೇ ನಾಟಕದ ಟಿಕೆಟ್ ಗಾಗಿ ಸಾವಿರಾರು ಕರೆಗಳು ಬಂದಿದ್ದೆ. ಟಿಕೆಟ್ ಗಳನ್ನು ಇವತ್ತಿನಿಂದ ನಿಮ್ಮದಾಗಿಸಿಕೊಂಡರೆ ನಾಟಕ ನೊಡುವ ಅವಕಾಶ ಸಿಗಬಹುದು ಎಂದು ಸಂಘಟಕರು ವಿನಂತಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter