Published On: Sat, Nov 24th, 2018

ದುಬಾಯಿ ಅಲ್ ನಾಸರ್‍ನಲ್ಲಿ `ವಿಶ್ವ ತುಳು ಸಮ್ಮೇಳನ ದುಬಾಯಿ 2018’

ದುಬಾಯಿ (ಅಲ್ ನಾಸರ್):ದೈವದೇವರುಗಳೆಲ್ಲವೂ ನಮ್ಮ ತುಳುನಾಡಿನಲ್ಲೇ ನೆಲೆಯಾಗಿ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಆದುದರಿಂದ ತುಳುವರು ಸಂಪ್ರದಾಯಸ್ಥರಾಗಿ ಬದುಕು ಕಂಡುಕೊಂಡವರಾಗಿದ್ದು, ತುಳುನಾಡ ಹಿರಿಮೆ, ಗರಿಮೆ ಏನೆಂದು ತಿಳಿಯ ಬೇಕಾದರೆ ಹೊರನಾಡಿನಲ್ಲಿ ತಿಳಿಯಬೇಕು. ದುಬಾಯಿ ಬಂಗಾರದ ನಾಡು. ರಾಜ ಕುಟುಂಬಸ್ಥರು ಆಳಿದ ಈ ನಾಡಿಗೆ ತುಳುವರು ಕೆಲಸದ ನಿಮಿತ್ತ ಬಂದು ಸಾಧಕರೆಣಿಸುತ್ತಿರುವುದು ತುಳುಮಾತೆಯ ಅನುಗ್ರಹವೇ ಸರಿ. ಇದು ಸ್ವರ್ಣಮಯ ದೇಶ ಎಂದೇ ಪ್ರಸಿದ್ಧಿ ಪಡೆದಿದ್ದು ಇಲ್ಲಿ ತುಳುನಾಡ ಸಂಸ್ಕೃತಿ, ಭಾಷೆ ಮೇಳೈಸುತ್ತಿರುವುದು ತುಳುನಾಡ ವೈಷ್ಟ ್ಯವಾಗಿದೆ ಎಂದು ಭಾರತದ ಸಾಂಸ್ಕೃತಿಕ ರಾಯಭಾರಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಪದ್ಮಭೂಷಣ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆ ನುಡಿದರು.

Vishwa TULU Sammelana Dubai (25)

ಸಾಗರೋತ್ತರ ತುಳುವರ ಕೂಟವು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲಭಾರತ ತುಳು ಒಕ್ಕೂಟದ ಸಹಯೋಗದೊಂದಿಗೆ ಅರಬ್ ಸಂಯುಕ್ತ ಸಂಸ್ಥಾನದ ದುಬಾಯಿ (ಯುಎಇ) ಅಲ್ ನಾಸರ್ ಅಲ್ಲಿನ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ವಿಶ್ವದ ತುಳುವರ ದ್ವಿದಿನಗಳ `ವಿಶ್ವ ತುಳು ಸಮ್ಮೇಳನ ದುಬಾಯಿ 2018’ನ್ನು ಶುಕ್ರವಾರ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಅವರು ಮಾತನಾಡಿದರು.

Vishwa TULU Sammelana Dubai (49)

Vishwa TULU Sammelana Dubai (44)

ಬ್ರಹ್ಮಾಂಡದೊಳಗೆ ಅರಸಿ ಬಾಳಲು ತುಳುನಾಡೇ ವಾಸಿ ಅಂದಾಗಲೇ ಈ ಹೊರನಾಡ ತುಳು ಸಮ್ಮೇಳನದ ಉದ್ದೇಶ ಪರಿಪೂರ್ಣ ಆಗುವುದು. ತುಳುವರು ಮತ್ತಷ್ಟು ಸ್ವಾಭಿಮಾನಿಗಳಾಗಿ ಸಾಧನೆಗಳ ಮೂಲಕ ಹೊರನಾಡಿನಲ್ಲಿಯೂ ಮುನ್ನಡೆಯಬೇಕು ಎಂದು ಹೇಳಿದರು.

Vishwa TULU Sammelana Dubai (47)

Vishwa TULU Sammelana Dubai (2)

ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ದುಬಾಯಿ ಯುಎಇ ಸಹನಾಶೀಲಾ ಸಚಿವ (ಟೊಲರೆನ್ಸ್ ಮಿನಿಸ್ಟರ್) ಶೇಖ್ ಮಬರಕ್ ಆಲ್ ನಹ್ಯನ್ ಮಾತನಾಡಿ, ತುಳುವರು ಸಹನೆ-ಸಹಬಾಳ್ವೆಗೆ ಇತರರಿಗೆ ಮಾದರಿ. ತುಳುವರು ಎಲ್ಲಿದ್ದರೂ ಸಾಂಘಿಕವಾಗಿ ಜೀವನ ರೂಪಿಸಿ ಅನ್ಯರನ್ನು ಒಗ್ಗೂಡಿಸುವ ಸದ್ಗುಣರು. ಕಾಯಕ ನಿಮಿತ್ತ ದುಬಾಯಿನಲ್ಲಿ ನೆಲೆಯಾದರೂ ತಮ್ಮ ಕೆಲಸ, ಕಾರುಬಾರುಗಳಿಂದ ಸ್ವಂತಿಕೆಯ ಪ್ರತಿಷ್ಠೆಯನ್ನು ರೂಪಿಸಿದ ಕೀರ್ತಿ ತುಳುವರದ್ದು. ಆದುದರಿಂದಲೇ ಭಾರತ ಮತ್ತು ಯುಎಇ ಸಂಬಂಧ ಅನ್ಯೋನ್ಯತೆಯಿಂದ ಮುಂದುವರಿದ ಕಾರಣ ಇಂತಹ ತುಳು ಸಮ್ಮೇಳನಕ್ಕೆ ಸಂಧಿಯಾಯಿತು ಎಂದರು.

Vishwa TULU Sammelana Dubai (48)

ತುಳು ಸಮ್ಮೇಳನದ ಪ್ರಧಾನ ಸಂಘಟಕ ಸರ್ವೋತ್ತಮ ಶೆಟ್ಟಿ ಅಬುಧಾಬಿ ಮತ್ತು ಬಳಗದ ಸಾರಥ್ಯ ಮತ್ತು ಎನ್‍ಎಂಸಿ ಸಮೂಹ ಸಂಸ್ಥೆಯ ಸ್ಥಾಪಕ ಮತ್ತು ಕಾರ್ಯಾಧ್ಯಕ್ಷ ಡಾ| ಬಿ.ಆರ್ ಶೆಟ್ಟಿ ಘನಾಧ್ಯಕ್ಷತೆಯಲ್ಲಿ ಆರಂಭಗೊಂಡ ವಿಶ್ವ ತುಳು ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿü ಅಭ್ಯಾಗತರುಗಳಾಗಿ ರೋಮನ್ ಕ್ಯಾಥೋಲಿಕ್ ಮಂಗಳೂರು ಪ್ರಾಂತ್ಯದ ಧರ್ಮಧ್ಯಕ್ಷ ಬಿಷಪ್ ಅ| ವಂ| ಡಾ| ಪೀಟರ್ ಪಾವ್ಲ್ ಸಲ್ದಾನ್ಹಾ, ಸಿಎಸ್‍ಐ ಪೆÇ್ರಟೆಸ್ಟೆಂಟ್ ಮಂಗಳೂರು ಪ್ರಾಂತ್ಯದ ಧರ್ಮಧ್ಯಕ್ಷ ಬಿಷಪ್ ವಂ| ಎಬಿನೆಜರ್ ಜತ್ತನ್ನ, ರೋಮನ್ ಕ್ಯಾಥೋಲಿಕ್ ಬಳ್ಳಾರಿ ಪ್ರಾಂತ್ಯದ ಧರ್ಮಧ್ಯಕ್ಷ ಬಿಷಪ್ ಅ| ವಂ| ಡಾ| ಹೆನ್ರಿ ಡಿಸೋಜಾ, ಮುಸ್ಲಿಂ ಧರ್ಮಶಾಸ್ತ್ರಜ್ಞ ಅಬ್ದುಸ್ಸಲಾಂ ಪುತ್ತಿಗೆ, ಕರ್ನಾಟಕದ ನಗರಾಭಿವೃದ್ಧಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವರಿ ಸಚಿವ ಯು.ಟಿ ಖಾದರ್, ಕರ್ನಾಟಕದ ಮಹಿಳಾ-ಮಕ್ಕಳ ಕಲ್ಯಾಣ, ಕನ್ನಡ-ಸಂಸ್ಕೃತಿ ಖಾತೆ, ಉಡುಪಿ ಜಿಲ್ಲಾ ಉಸ್ತುವರಿ ಸಚಿವೆ ಡಾ| ಜಯಮಾಲ ಹಾಗೂ ಗೌರವ ಅತಿಥಿüಗಳಾಗಿ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊೈಲಿ, ಆಳ್ವಾ’ಸ್ ಎಜ್ಯುಕೇಶನ್ ಟ್ರಸ್ಟ್ ಮೂಡುಬಿದಿರೆ ಇದರ ಅಧ್ಯಕ್ಷ ಡಾ| ಎಂ.ಮೋಹನ್ ಆಳ್ವ, ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್, ಅನಿವಾಸಿ ಭಾರತೀಯ ಉದ್ಯಮಿಗಳಾದ ರೋನಾಲ್ಡ್ ಕೊಲಾಸೋ ಮತ್ತು ಸುಜಾತ್ ಶೆಟ್ಟಿ, ಬಸವ ಸಮಿತಿ ಅಧ್ಯಕ್ಷ ಬಸವ ಜತ್ತಿ, ಚಂದ್ರಕಲಾ ಬಿ.ಆರ್ ಶೆಟ್ಟಿ, ಸಂಗೀತ ನಿರ್ದೇಶಕ ಗುರು ಕಿರಣ್ ಹಾಗೂ ಕರ್ನಾಟಕರ ರಾಜ್ಯ ತುಳು ಅಕಾಡಮಿ ಅಧ್ಯಕ್ಷ ಎ.ಸಿ ಭಂಡಾರಿ, ಅಖಿಲಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Vishwa TULU Sammelana Dubai (43)

Vishwa TULU Sammelana Dubai (38)

Vishwa TULU Sammelana Dubai (34)

ನಶ್‍ವನ್ ಸಭಾಗೃಹದ ಮುಂಭಾಗ ಧ್ವಜಾರೋಹನಗೈದು ಅತಿಥಿüಗಳನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು. ರಾಣಿ ಅಬ್ಬಕ್ಕ, ಅಬ್ಬಗ ದರಗ, ಕೋಟಿ-ಚನ್ನಯ, ರೆವರೆಂಡ್ ಕಿಟ್ಟಲ್, ಅಗೋಲಿ ಮಂಜಣ್ಣ, ಡಾ| ಕಯ್ಯಾರ ಕಿಂಜಣ್ಣ ರೈ ಅವರನ್ನು ಸ್ಮರಿಸಲಾಯಿತು. ತುಳು ಸಮ್ಮೇಳನದ ಪ್ರಧಾನ ಸಂಘಟಕ ಸರ್ವೋತ್ತಮ ಶೆಟ್ಟಿ ಅಬುಧಾಬಿ ಸ್ವಾಗತಿಸಿ ಪ್ರಸ್ತಾವನೆಗೈದರು. ಭಾಸ್ಕರ್ ರೈ ಕುಕ್ಕುವಳ್ಳಿ ಮತ್ತು ಪ್ರಿಯಾ ಹರೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ| ಬಿ.ಆರ್ ಶೆಟ್ಟಿ ಅತಿಥಿüಗಳಿಗೆ ಪುಷ್ಫಗುಪ್ಚ, ಸ್ಮರಣಿಕೆಗಳನ್ನೀಡಿ ಗೌರವಿಸಿದರು. ಸಾಗರೋತ್ತರ ಕೊಲ್ಲಿ ರಾಷ್ಟ್ರದ ತುಳುವರ ಒಕ್ಕೂಟ ದುಬಾಯಿ ಮುಖ್ಯಸ್ಥ ಶೋಧನ್ ಪ್ರಸಾದ್ ವಂದಿಸಿದರು.

Vishwa TULU Sammelana Dubai (46)
ಸಾಂಸ್ಕøತಿಕ ಕಾರ್ಯಕ್ರಮವಾಗಿ ಗಲ್ಫ್ ರಾಷ್ಟ್ರದ ಸುಮಾರು ಆರು ತಂಡಗಳು ಸಮೂಹ ಜಾನಪದ ನೃತ್ಯಾವಳಿಗಳನ್ನು ಪ್ರಸ್ತುತ ಪಡಿಸಿದರು. ಅಂತೆಯೇ ಚಕ್ರಪಾಣಿ ನೃತ್ಯ ಕೇಂದ್ರವು ಸುರೇಶ್ ಅತ್ತಾವರ ಮಂಗಳೂರು ಸಾರಥ್ಯದಲ್ಲಿ `ತುಳುನಾಡ ಪರ್ಬೊಲು’ ನೃತ್ಯ ರೂಪಕ, ಯಕ್ಷಮಿತ್ರರು ದುಬಾಯಿ ಮಂಡಳಿ `ಜಾಂಬವತಿ ಕಲ್ಯಾಣ’ತುಳು ಯಕ್ಷಗಾನ ಪ್ರಸಂಗವನ್ನು, ದುಬಾಯಿ ಹವ್ಯಾಸಿ ಕಲಾವಿದ ಕೂಡುವಿಕೆಯಲ್ಲಿ ಗಿರೀಶ್ ನಾರಾಯಣ್ ನಿರ್ದೇಶನದಲ್ಲಿ `ಪಿಲಿನಲಿಕೆ’ (ಹುಲಿವೇಷ ಕುಣಿತ), ಪ್ರಸನ್ನ ಕಾಪು ಬಳಗದ ಬಲೇ ತೆಲಿಪಾಲೆ ತಂಡ ಮತ್ತು ಉಮೇಶ್ ಮಿಜಾರು ತಂಡಗಳು ಹಾಸ್ಯ ಪ್ರಹಸನ, ಸತೀಶ್ ಶೆಟ್ಟಿ ಪಟ್ಲ ಮತ್ತು ತಂಡವು `ಯಕ್ಷಗಾನ ನಾಟ್ಯ ವೈಭವ’, ಮತ್ತು `ಯಕ್ಷಗಾನ ಹಾಸ್ಯ ವೈಭವ’ ಸಾದರ ಪಡಿಸಿದರು ಮತ್ತು ಪ್ರಮೋದ್ ಕುಮಾರ್ ಬಳಗದ ವರ್ಸಾಟೈಲ್ಸ್ ದುಬಾಯಿ ತಂಡವು ರಸ ಮಂಜರಿ ನಡೆಸಿದರು. ಕದ್ರಿ ನವನೀತ್ ಶೆಟ್ಟಿ ಮತ್ತು ಸಾಹಿಲ್ ರೈ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

Vishwa TULU Sammelana Dubai (45)

ಅಭಾತುಒ ಇದರ ಗೌ| ಪ್ರ| ಕಾರ್ಯದರ್ಶಿ ನಿಟ್ಟೆ ಶಶಿಧರ್ ಶೆಟ್ಟಿ, ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ, ಕೆನರಾ ಪಿಂಟೋ ಟ್ರಾವೆಲ್ಸ್ ಮಾಲೀಕ ಹಾಗೂ ಆಲ್ ಇಂಡಿಯಾ ಟ್ರಾನ್ಸ್‍ಪೆÇೀರ್ಟ್ ಕಾಂಗ್ರೇಸ್‍ನ ಕರ್ನಾಟಕ ರಾಜ್ಯಧ್ಯಕ್ಷ ಸುನೀಲ್ ಪಾಯ್ಸ್ ಪುತ್ತೂರು, ಹೆಸರಾಂತ ವಾಸ್ತುತಜ್ಞ , ಪುರೋಹಿತ ಡಾ| ಎಂ.ಜೆ ಪ್ರವೀಣ್ ಭಟ್ ಸಯಾನ್, ತೋನ್ಸೆ ವಿಜಯಕುಮಾರ್ ಶೆಟ್ಟಿ, ದುಬಾಯಿಯ ಪ್ರತಿಷ್ಠಿತ ಉದ್ಯಮಿ ಪ್ರವೀಣ್ ಶೆಟ್ಟಿ ವಾಕ್ವಾಡಿ, ಸುಧೀರ್‍ಕುಮಾರ್ ಶೆಟ್ಟಿ, ಶೀಲಾ ಸುಧೀರ್ ಕುಮಾರ್, ಚಂದ್ರಶೇಖರ್ ಆರ್.ಬೆಲ್ಚಡ, ಕರ್ನೂರು ಮೋಹನ್ ರೈ, ನಾರಾಯಣ ಕಾಪು(ದುಬಾಯಿ), ಅಜೆಕಾರು ಬಾಲಕೃಷ್ಣ ಶೆಟ್ಟಿ ಮತ್ತಿತರ ಗಣ್ಯರು ಹಾಗೂ ತುಳು ಸಂಘ ಬರೋಡಾ, ತುಳುಕೂಟ ಅಂಲ್ಕೇಶ್ವರ, ವಿಶ್ವ ತುಳುವೆರೆ ಆಯೋನದಿಂದ ನೂರಾರು ತುಳುವರು ಆಗಮಿಸಿದ್ದರು.

Vishwa TULU Sammelana Dubai (35)

Vishwa TULU Sammelana Dubai (28)

Vishwa TULU Sammelana Dubai (27)

Vishwa TULU Sammelana Dubai (29)
ಸಂಪ್ರದಾಯಸ್ಥ ಉಡುಗೆ-ತೊಡುಗೆ: ತುಳುನಾಡ ಜನತೆಯ ತಿಂಡಿತಿನಿಸುಗಳು
ಸಮಾವೇಶಕ್ಕೆ ಆಗಮಿಸಿದ ಸಂಪ್ರದಾಯಸ್ಥರಿಗೆ ಸಾಂಪ್ರದಾಯದಂತೆಯೇ ಬರಮಾಡಿ ಕೊಳ್ಳಲಾಯಿತು. ಕೃಷಿಕ ಸಂಪ್ರದಾಯಸ್ಥ ತುಳುನಾಡ ಜನತೆಯ ತಿಂಡಿತಿನಿಸುಗಳೂ ಬಂದಂತಹ ಗಣ್ಯರಿಗೆ ಮಹಿಳಾ ಮಣಿಯರು ಪರಂಪರಿಕಾ ರುಚಿರುಚಿಕರ ಬಿಸಿಬಿಸಿಯಾದ ಫಲಹಾರ, ಊಟೋಪಚಾರ ದೊಂದಿಗೆ ಉಣಬಡಿಸಿದರು. ದೇವೇಶ್ ಆಳ್ವ ದುಬಾಯಿ ಇವರ ಉಸ್ತುವರಿಯಲ್ಲಿ ತುಳುನಾಡ ಶೈಲಿಯ ಬಗೆಬಗೆಯ ತಿಂಡಿ ತಿಸಿಸುಗಳು ಸಿದ್ಧಗೊಂಡಿತ್ತು.

ಜುಬೇರ್ ಖಾನ್ ಮಂಗಳೂರು ಮತ್ತು ಬಳಗವು ತುಳುನಾಡ ಪರಂಪರೆಯ ವಸ್ತುಪ್ರದರ್ಶನ ಆಯೋಜಿಸಿದ್ದು ಆಕರ್ಷಿತವಾಗಿ ಸರ್ವರ ಮನಸೆಳೆಯಿತು. ನಿರೀಕ್ಷೆಗೂ ಮಿಕ್ಕಿ ತುಂಬಿತುಳುಕಿದ ತುಳುವರಿಂದ ತುಳುನಾಡು ಇಂದು ದುಬಾಯಿಯಲ್ಲಿದೆಯೋ ಅಥವ ದುಬಾಯಿ ತುಳುನಾಡುನಲ್ಲಿದೆಯೋ ಅನ್ನುವಂತಿತ್ತು. ಅಂತೂ ಸಾಧಕ ದುಬಾಯಿ ತುಳುವರಿಂದ ದುಬಾಯಿ ತುಳುನಾಡಿಗೆ ಸಾಮೀಪ್ಯವಾಗಿದೆ ಎಂದು ತೋರ್ಪಡಿಸಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter