ನವದೆಹಲಿ(ಜ.25): ಎಡಬಿಡಂಗಿ ತರ ಹೇಳಿಕೆಗಳನ್ನು ನೀಡುತ್ತಾ ಕಾಲಲಳೆಯುತ್ತಿರುವ ದೆಹಲಿಯ ವಿವಾದಿತ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೀಗ ಮಾಧ್ಯಮಗಳ ವಿರುದ್ಧ ಹರಿಹಾಯಿದ್ದಾರೆ. ಮಾಧ್ಯಮಗಳಿಗೆ ಕೆಲವರು ದುಡ್ಡುಕೊಟ್ಟು ಆಮ್ ಆದ್ಮಿ ವಿರುದ್ಧವಾಗಿ ಬರೆಯುವಂತೆ ಮಾಡುತ್ತಿದ್ದಾರೆ ಎಂದು ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ವಿರುದ್ಧವೇ ಹರಿಹಾಯ್ದಿದ್ದಾರೆ. ಪೊಲೀಸರು ದೆಹಲಿ ಸರಕಾರದ ಅಧಿಕಾರಕ್ಕೆ ಸಿಗಬೇಕು ಎಂದು ಕೇಜ್ರಿವಾಲ್ ರಾಜಧಾನಿಯಲ್ಲಿ ಧರಣಿ ಕೂತಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳು ಕೇಜ್ರಿ ಅವಿವೇಕತನವನ್ನು ಟೀಕಿಸಿದ್ದವು. ಅಲ್ಲದೆ ಗಣರಾಜ್ಯೋತ್ಸವದ ಬಗ್ಗೆ ಅದೊಂದು ಹೈಫರೊಫೈಲ್ ಜನರ ಮನರಂಜನೆಗೆ ಮಾಡುವು ಕಾರ್ಯಕ್ರಮ ಎಂದು ಹೇಳಿಕೆಯನ್ನೂ ನೀಡಿದ್ದರು. ಆಗ ಮಾಧ್ಯಮಗಳಲ್ಲಿ ಬಹುದೊಡ್ಡ ಚಚರ್ೆಯಾಗಿ ಎಲ್ಲರೂ ಕೇಜ್ರಿವಾಲ್ ಅವರ ವರ್ತನೆಯನ್ನ ಟೀಕಿಸಿದ್ದರು. ಆದರೂ ತಮ್ಮ ವರ್ತನೆಯನ್ನು ಸಮಥರ್ಿಸಿಕೊಂಡಿದ್ದ ಕೇಜ್ರಿವಾಲ್ ಸುಪ್ರೀಂಕೋಟರ್್ನಿಂದ ಮಂಗಳಾರತಿ ಮಾಡಿಸಿಕೊಂಡಿದ್ದರು. ಸಂವಿಧಾನದಲ್ಲಿ ಧರಣಿ ಕೂರಲು ಅವಕಾಶವಿದೆ, ಅಲ್ಲದೆ ಮುಖ್ಯಮಂತ್ರಿ ಆದವರು ಧರಣಿ ಕೂರಬಾರದೆಂದು ಯಾರೂ ಹೇಳಿಲ್ಲ ಎಂದು ತನ್ನ ವಾದವನ್ನು ಸಮರ್ಥನೆ ಮಡಲು ಕೇಜ್ರಿ ವಾದಗಿಳಿದಿದ್ದಾರೆ. ರಾಜ್ಯದ ಪ್ರತಿಯೊಂದು ಪೊಲೀಸ್ ಠಾಣೆಯಿಂದ ನನಗೆ 10 ಲಕ್ಷ ರುಪಾಯಿ ಮಾಮೂಲು ಬರಬೇಕೆಂದು ಹೇಳಿದಿದ್ದರೆ ಎಲ್ಲವೂ ಸರಿ ಧರಣಿ ಸ್ಥಳದಲ್ಲಿ ಪೊಲೀಸರು 144ನೇ ಸೆಕ್ಷನ್ ಅಡಿ ನಷೇಧಾಜ್ಞೆ ಹೇರಿದ್ದ ಕ್ರಮವೇ ಸಂವಿಧಾನ ವಿರೋಧಿ ಎಂದು ಕೇಜ್ರಿವಾಲ್ ವ್ಯಂಗ್ಯವಾಡಿದ್ದಾರೆ.

