narendramodi-540310
ಉತ್ತರಪ್ರದೇಶ: “ಇಂದು ನೇತಾಜಿ ಸುಭಾಷ್ಚಂದ್ರ ಬೋಸ್ರವರ ಜನ್ಮದಿನ, ನನಗೆ ಕೇವಲ 60 ತಿಂಗಳ ಅವಧಿ ಕೊಡಿ, ನಿಮಗೆ ನಾನು ಸುಂದರ ನೆಮ್ಮದಿಯ ಜೀವನ ಹಾಗೂ ಅದಮ್ಯ ಸಂತಸವನ್ನು ನೀಡುತ್ತೇನೆ….” ಹೀಗೆಂದು ಮಾಮರ್ಿಕವಾಗಿ ನುಡಿದವರು ಬಿಜೆಪಿ ಪ್ರಧಾನಿ ಅಭ್ಯಥರ್ಿ ನರೇಂದ್ರ ಮೋದಿ.

ಅವರು ಉತ್ತರಪ್ರದೇಶದ ಗೋರಕ್ಪುರದಲ್ಲಿ ನಡೆದ ಬೃಹತ್ ರ್ಯಾಲಿಯನ್ನುದ್ದೇಶಿ ಮಾತಾಡುತ್ತಿದ್ದರು.
ನಮ್ಮ ದೇಶ ಶ್ರೀಮಂತವಾಗಿದೆ, ಜನರೂ ಶ್ರೀಮಂತರಾಗಿದ್ದಾರೆ, ಮುಂದಿನ ಚುನಾವಣೆಯಲ್ಲಿ ಬಡತನದ ವಿರುದ್ಧ ಹೋರಾಟ ಮಾಡಲಾಗುವುದು. ನಿಮಗೆ ಭವ್ಯ ಭಾರತದ ಬಗ್ಗೆ ಏನೆಲ್ಲಾ ಕನಸು ಕಂಡಿದ್ದೀರೋ ಅದನ್ನು ನನಸು ಮಾಡುವುದೇ ನನ್ನ ಕೆಲಸ, ನೀವು ಕಾಂಗ್ರೆಸ್ಗೆ 60 ವರ್ಷಗಳನ್ನು ನೀಡಿದ್ದಿರಿ, ಆದರೆ ನನಗೆ ಕೇವಲ 60 ತಿಂಗಳು ಕೊಟ್ಟರಷ್ಟೇ ಸಾಕು, ನಾನು ನಿಮ್ಮ ಬದುಕನ್ನೇ ಬದಲಿಸುತ್ತೇನೆ. ಉತ್ತರಪ್ರದೇಶದಲ್ಲಿ ಬಡತನವನ್ನು ನಿಮರ್ೂಲನೆಗೊಳಿಸಬೇಕು, ಕೃಷಿ ಇಲ್ಲಿ ಮುಂದೆ ಸಾಗಬೇಕು, ಅದಕ್ಕಾಗಿ ನಮಗೆ ಶಕ್ತಿ ಅಗತ್ಯ. ಎಂದರು

ಮುಂಬರು ದಿನಗಳಲ್ಲಿ ಯಾವ ಪಕ್ಷ ಗೆಲ್ಲಲಿದೆ ಎಂದು ಇಡೀ ಭಾರತವೇ ನಿರ್ಧರಿಸಿದೆ. ಭಾರತವನ್ನು ಕಾಂಗ್ರೆಸ್ ಮುಕ್ತ ರಾಷ್ಟ್ರವನ್ನಾಗಿಸಲು ಸಂಕಲ್ಪ ಮಾಡಬೇಕು… ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದ್ದು ಇದು ಮುಂದಿನ ಲೋಕಸಭಾ ಚುನಾವಣೆಯ ಫಲಿತಾಂಶವೇನೆಂಬುವುದನ್ನು ಈಗಾಗಲೇ ನಿರ್ಧರಿಸಿದೆ. ವೋಟ್ ಬಂದಾಗ ದಲಿತ, ಅಲ್ಪಸಂಖ್ಯಾತರೆಂದು ಬಡಬಡಾಯಿಸುವ ಕಾಂಗ್ರೆಸಿಗರು ಇಷ್ಟರವರೆಗೆ ಮಾಡಿದ್ದು ಕೇವಲ ಓಟ್ಬ್ಯಾಂಕ್ ಅಷ್ಟೆ. ಆದರೆ ಈ ಬಾರಿ ದಲಿತ ಮತ್ತು ಬುಡಕಟ್ಟು ಜನರ ಪ್ರಾಬಲ್ಯವಿರುವ ರಾಜಸ್ಥಾನದಲ್ಲಿ 34 ಸೀಟುಗಳಲ್ಲಿ ಒಂದೇ ಒಂದು ಸೀಟನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಬಡವರನ್ನು ಹೀಯಾಳಿಸುವುದೇ ಕಾಂಗ್ರೆಸ್ನ ಮುಖ್ಯ ಕೆಲಸ. ಅದಕ್ಕಾಗಿಯೇ ನನ್ನನ್ನು ಚಹಾ ಮಾರುವವನು ಎಂದು ಲೇವಡಿ ಮಾಡಿದ್ದಾರೆ. ಎಂದು ಒಂದೇ ಸಮನೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು

By suddi9

Leave a Reply

Your email address will not be published. Required fields are marked *