ನವದೆಹಲಿ: ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆಂದು ಆರೋಪಿಸಿ ಸ್ಥಳೀಯರು ಮಾಹಿತಿ ನೀಡಿದರು ಎಂಬ ಕಾರಣಕ್ಕೆ ರಾತ್ರಿ ವೇಳೆ ಮಹಿಳೆಯರೇ ಇದ್ದ ಮನೆಗೆ ಗುಂಪನ್ನು ನುಗ್ಗಿಸಿ ಅಲ್ಲಿದ್ದ ಉಗಾಂಡ ಮೂಲದ ಮಹಿಳೆಗೆ ಥಳಿಸಿ ದೌರ್ಜನ್ಯವೆಸಗಿದ್ದಲ್ಲದೆ ಅವರನ್ನು ಬಲತ್ಕಾರವಾಗಿ ಸಾಗಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿರುವ ಕಾನೂನು ಬಾಹಿರ ಕೃತ್ಯದ ಮುಂದಾಳತ್ವವಹಿಸಿದ್ದ ದೆಹಲಿಯ ಕಾನೂನು ಸಚಿವ ಸೋಮನಾಥ್ ಭಾರ್ತಿಯ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಒತ್ತಡಕ್ಕೆ ಸಿಲುಕಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಈ ಸಂಬಂಧ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರನ್ನ ಗುರುವಾರ ಭೇಟಿ ಮಾಡಿ ಚರ್ಚಿಸಿಸೋಮನಾಥ್ ಭಾರ್ತಿಯನ್ನ ಸಚಿವ ಸಂಪುಟದಿಂದ ಕೈಬಿಡುವ ಸಾಧ್ಯತೆಯಿದೆ.

ವೇಶ್ಯಾವಾಟಿಕೆ ಹಾಗೂ ಮಾದಕ ಪದಾರ್ಥ ಮಾರಾಟದಂತಹಾ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದಾರೆಂದು ಸ್ಥಳೀಯರು ದೂರು ನೀಡಿದ್ದಕ್ಕೆ ರಾತ್ರಿ ವೇಳೆ, ತಮ್ಮ ಆಮ್ ಆದ್ಮಿ ಬೆಂಬಲಿಗರೊಂದಿಗೆ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ನೈತಿಕ ಪೊಲೀಸ್ ಗಿರಿ ಮೆರೆದು ಉಗಾಂಡ ಮೂಲದ ಮಹಿಳೆಯರಿಗೆ ಕಿರುಕುಳ ನೀಡಿರುವ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು   ಭಾರ್ತಿ ಹೆಸರನ್ನೇ ಹೆಸರಿಸಿ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆಯಿದೆ.

By suddi9

Leave a Reply

Your email address will not be published. Required fields are marked *