indexಬೆಂಗಳೂರು: ಬೆಂಗಳೂರಿನ ಚಿನ್ನ ಸ್ವಾಮೀ ಕ್ರೀಡಾಂಗಣಕ್ಕೆ ಬಾಂಬಿಟ್ಟು ಉಡಾಯಿಸಿದ್ದು ನಾನೇ ಎರಡು ದಿನ ಮೊದಲೇ ಬಂದು ಸ್ಥಳ ಗೊತ್ತುಮಾಡಿದ್ದೆ ಎಂದು ಬಂಧಿತ ಇಂಡಿಯನ್ ಮುಜಾಹಿದ್ದೀನ್ ತಂಡದ ಉಗ್ರ ಯಾಸೀನ್ ಭಟ್ಕಳ್ ಬೆಂಗಳೂರು ಪೊಲೀಸರ ವಿಚಾರಣೆಯ ವೇಳೆ ತಪ್ಪೊಪಿಕೊಂಡಿದ್ದಾನೆ ಬೆಂಗಳೂರಿನಲ್ಲಿ ನಡೆದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಬಂಧಿತ ಉಗ್ರ ಯಾಸೀನ್ನನ್ನು ವಿಚಾರಣೆಗೆಂದು ಬೆಂಗಳೂರಿಗೆ ಕರೆದುಕೊಂಡು ಬರಲಾಗಿತ್ತು. ಈ ವೇಳೆ ತನ್ನ ಕೃತ್ಯವನ್ನು ಬಾಯ್ಬಿಟ್ಟಿದ್ದಾನೆ. 2010 ಏಪ್ರಿಲ್ 17ರಂದು ಈ ಬಾಂಬ್ ಸ್ಫೋಟದ ಘಟನೆ ನೆಡದಿತ್ತು. ಅಲ್ಲದೆ ಗಾಂಧಿಬಜಾರ್, ಬಿವಿಕೆ ಅಯ್ಯಂಗಾರ್ ಸ್ಥಳದಲ್ಲೂ ಬಾಂಬಿಟ್ಟಿದ್ದು ನಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಇನ್ನಷು ವಿಚಾರಣೆಗೆಂದು ಪೊಲೀಸರು ಕೊಪ್ಪಕ್ಕೆ ಕರೆದೊಯ್ದಿದ್ದಾರೆ

By suddi9

Leave a Reply

Your email address will not be published. Required fields are marked *