ಕೈಕಂಬ:ಗುರುಪುರ ಪೊಂಪೈ ಮಾತೆ ದೇವಾಲಯದಲ್ಲಿ ಸಣ್ಣ ಕ್ರೀಸ್ತ ಸಮುದಾಯದ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಭ್ರಮದ ಬಲಿಪೂಜೆಯ ನೇತೃತ್ವವನ್ನು ಮಂಗಳೂರಿನ ಜೆಪ್ಪು ಸಂತ ಅಂಥೋನಿಯವರ ಆಶ್ರಮದ ನಿರ್ದೇಶಕರಾದ ಫಾದರ್ ಒನಿಲ್ ಡಿಸೋಜಾರವರು ನೇರವೆರಿಸಿದರು. ತದನಂತರ ಸಭಾ ಕಾರ್ಯಕ್ರಮದಲ್ಲಿ ಚರ್ಚ್‍ನವರಾದ ಪ್ರಸ್ತುತ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಆರ್.ಲೋಬೋರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪೊಂಪೈ ಫಾಲ್ಕೆ ಚರ್ಚ್ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಅವರು ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಪಾವ್ಲ್ ಪಿಂಟೋ, ಜೊನ್ಸನ್ ಲೋಬೋ, ಕಾರ್ಯದರ್ಶಿ ಲಿಲ್ಲಿ ಮಥಾಯಿಸ್, ಸಾಂಸ್ಕ್ರತಿಕ ಕಾರ್ಯಕ್ರಮದ ಕಾರ್ಯದರ್ಶಿ ಅನಿತಾ ಫೆರ್ನಾಂಡಿಸ್, ಸಣ್ಣ ಸಮುದಾಯ ಸಂಚಾಲಕರಾದ ರೊಯ್ಲೆನ್ ಲೋಬೋರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.




















