ಬಂಟ್ವಾಳ: ನವಜೀವನ ಗೇಮ್ಸ್ ಕ್ಲಬ್ (ರಿ.) ಮತ್ತು ನವಜೀವನ ಹನುಮಾನ್ ಮಂದಿರ (ರಿ.) ಪಾಣೆಮಂಗಳೂರು ಇದರ ವತಿಯಿಂದ ನಡೆದ ಗೂಡುದೀಪ ಸ್ಪರ್ಧೆಯಲ್ಲಿ ಜಿತೇಶ್ ನಾಯಕ್ ಶಂಭೂರು ನಗದು ಮತ್ತು ಟ್ರೋಫಿಯೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಉಮೇಶ್ ಸಪಲ್ಯ ಮೊಗರ್ನಾಡ್ ನಗದು ಮತ್ತು ಟ್ರೋಫಿಯೊಂದಿಗೆ ದ್ವಿತೀಯ ಹಾಗೂ ಕೀರ್ತಿ ಎ. ಶಂಭೂರು ನಗದು ಮತ್ತು ಟ್ರೋಫಿ ತೃತೀಯ ಸ್ಥಾನ ಪಡೆದಿದ್ದಾರೆ.
ನವಜೀವನ ಹನುಮಾನ್ ಮಂದಿರದ ಅಧ್ಯಕ್ಷರಾದ ಶರತ್ ಎಚ್ ಹಾಗೂ ನವಜೀವನ ಗೇಮ್ಸ್ ಕ್ಲಬ್ ನ ಅಧ್ಯಕ್ಷರಾದ ಸಂದೀಪ್ ಕುಲಾಲ್ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಬಹುಮಾನ ವಿತರಣೆಯ ವೇಳೆ ಉಪಸ್ಥಿತರಿದ್ದರು.
