ಬಂಟ್ವಾಳ:ಇಲ್ಲಿಗೆ ಸಮೀಪದ ನೆಟ್ಲ ಶ್ರೀ ಕ್ಷೇತ್ರ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ನ.21 ರಿಂದ 23 ರವರೆಗೆ ನಡೆಯುವ ಲಕ್ಷದೀಪೋತ್ಸವ, ಭಜನಾ ಕಾರ್ಯಕ್ರಮದ ಹಿನ್ನಲೆಯಲ್ಲಿಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಲ್ಲಡ್ಕ ಇದರ ವತಿಯಿಂದ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಸೇವಾ ಕಾರ್ಯಕ್ರಮ ನಡೆಸಲಾಯಿತು.

ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಲ್ಲಡ್ಕ ದ ಅಧ್ಯಕ್ಷ ಗಣೇಶ್ ನೆಟ್ಲ, ಘಟಕ ಸಂಯೋಜಕ ವಿದ್ಯಾ, ಸದಸ್ಯರಾದ ವೆಂಕಪ್ಪ ಜಿ ಸಂತೋಷ್ ಹರಿಶ್ ದನಂಜಯ ಮಾಧವ ಸಾಲಿಯಾನ್,ತುಳಸಿ ಈ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.
ಶೌರ್ಯ ತಂಡದ ಶ್ರಮದಾನ ಕಾರ್ಯಕ್ಜೆ ದೇವಸ್ಥಾನದ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.
