ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ರಿ. ಬಂಟ್ವಾಳ ವಲಯದ ವತಿಯಿಂದ ನರಿಕೊಂಬು ಗ್ರಾಮದ ನಾಟಿ ದ.ಕ.ಜಿ. ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಒಂದರಿಂದ ಐದನೇ ತರಗತಿಯವರೆಗಿನ ಮಕ್ಕ ಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಾದ ಎಲ್ಲಾ ಮಕ್ಕಳಿಗೆ ಬಹುಮಾನ ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮ ವನ್ನು ಜಿಲ್ಲಾ ಕ್ರೀಡಾಕಾರ್ಯದರ್ಶಿ ಹರೀಶ್ ಕುಂದರ್ ಉದ್ಘಾಟಿಸಿ ಶುಭಹಾರಯುಸಿದರು. ವಲಯದ ಅಧ್ಯಕ್ಷ ರಾದ ರಾಜೇಂದ್ರ ಕೆ ಅಧ್ಯಕ್ಷತೆ ವಹಿಸಿದ್ದರು.ಕೃಷ್ಣ ರಾಜ್ ರಾವ್ ರವರು ಸ್ವಾಗತಿಸಿ, ರವಿ ಕಲ್ಪನೆ ವಂದಿಸಿದರು. ಮುಖ್ಯ ಶಿಕ್ಷಕಿ ಪ್ರಭಾವತಿ ಯವರು ಕಾರ್ಯಕ್ರಮ ನಿರೂಪಿಸಿದರು.
ಈ ಸಂಧರ್ಭದಲ್ಲಿ ವಲಯದ ಮಾಜಿ ಅಧ್ಯಕ್ಷರುಗಳಾದ ದಯಾನಂದ್ ಬಂಟ್ವಾಳ, ಆನಂದ್ ಏನ್, ಉಪಾಧ್ಯಕ್ಷರಾದ ಹರೀಶ್ ನಾಟಿ, ವಿಠ್ಠಲ್ ಕೋಟ್ಯಾನ್, ಕಿಶೋರ್ ಶೆಟ್ಟಿ, ಶಾಲಾ ಎಸ್ ಡಿ ಯಂ ಸಿ ಸದಸ್ಯರು ಹಾಗೂ ಶಿಕ್ಷಕಿ ವೃಂದದವರು ಉಪಸ್ಥಿತರಿದ್ದರು.
