ಶ್ರೀ ಕ್ಷೇತ್ರ ಪೊಳಲಿಯಲ್ಲಿ ಸಚಿವ ರಮಾನಾಥ ರೈಯವರು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿಯ ಸನ್ನಿಧಿಯಲ್ಲಿ ಶೀಘ್ರವಾಗಿ ಮಳೆ ಬರಲು ಶ್ರೀ ದೇವಿಯಲ್ಲಿ ಇಂದು ಬೆಳಗ್ಗೆ ಶನಿವಾರ ವಿಶೇಷ ಪ್ರಾರ್ಥನೆ ಸಲ್ಲಿಸಸಿದರು. ದೇವಳದ ವತಿಯಿಂದ ಪವಿತ್ರಮಾಣಿ ಮಾಧವ ಭಟ್ ಅರ್ಚಕ ರಾಮ್ ಭಟ್ ವಿಶೇಷ ಪೂಜೆ ನೇರವೇರಿಸಿ ದೇವಿಯಲ್ಲಿ ಪ್ರಾರ್ಥಿಸಿದರು. ದೇವಳದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ, ಉಳಿಪಾಡಿ ಗುತ್ತು ತಾರನಾಥ ಆಳ್ವ, ಕಾರ್ಯನಿರ್ವಣಾಧಿಕಾರಿ ಹರಿಶ್ಚಂದ್ರ ಹಾಗೂ ಸಚಿವರೊಂದಿಗೆ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ.ಪಂ.ಸದಸ್ಯ ಯಶವಂತ ಪೂಜಾರಿ ಪೊಳಲಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕಾರ್ಪೋರೇಟರ್ ಸಂತೋಷ್, ಮಾಜಿ ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ್ ಭಂಡಾರಿ, ವೆಂಕಟೇಶ್ ನಾವಡ ಪೊಳಲಿ, ಕರಿಯಂಗಳ ವಲಯ ಕಾಂಗ್ರೇಸ್ ಅಧ್ಯಕ್ಷ ಉಮೇಶ್ ಆಚಾರ್ಯ, ಚಂದ್ರಹಾಸ್ ಪಲ್ಲಿಪಾಡಿ, ಪೊಳಲಿ ವ್ಯ. ಸೇ. ಸಹಕಾರಿ ಸಂಘದ ಅಧ್ಯ ಕ್ಷ ಸಂಪತ್ ಕುಮಾರ್ ಶೆಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು.





