*ಸಾಮೂಹಿಕ ಕಾರ್ಯಗಳಲ್ಲಿ ಸಾಮಾಜಿಕ ಹಿತಚಿಂತನೆಯೂ ಇರಬೇಕು*-ಸಚಿವ ರೈ
*ಸಾಮೂಹಿಕ ಕಾರ್ಯಗಳಲ್ಲಿ ಸಾಮಾಜಿಕ ಹಿತಚಿಂತನೆಯೂ ಅಡಕವಾಗಿರಬೇಕು. ಸಾಮೂಹಿಕ ವಿವಾಹ, ಅಶಕ್ತರಿಗೆ ಸ್ವಾವಲಂಬನೆಯ ಬದುಕಿಗೆ ಪೂರಕ ನೆರವು. ಇವೆಲ್ಲವೂ ಸಾಮಾಜಿಕ ಸಮತೋಲನವನ್ನು ಕಾಯ್ದುಕೊಳ್ಳುವುದರೊಂದಿಗೆ ಸಾಮರಸ್ಯದ ವಾತಾವರಣ ರೂಪಿಸಲು ಸಹಕಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಸರಕಾರ ಕೂಡಾ ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಒತ್ತಾಯಿಸಲಾಗುವುದು ಕೇವಲ ಬಡಜನರು ಮಾತ್ರವಲ್ಲ ಶ್ರೀಮಂತರು ಕೂಡಾ ಸಾಮೂಹಿಕ ವಿವಾಹಗಳಲ್ಲಿ ಪಾಲ್ಗೊಂಡಾಗ ಸಮಾನತೆಯ ವಾತಾವರಣ ಮೂಡುತ್ತದೆ.* ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು
ಅವರು ಸೂರಲ್ಪಾಡಿಯ ಇರ್ಷಾದುಲ್ ಮಸ್ಲಿಮೀನ್ ಯೂತ್ ಅಸೋಸಿಯೇಶನ್‍ನ ಆಶ್ರಯದಲ್ಲಿ ಭಾನುವಾರದಲ್ಲಿ ಪಾಲ್ಗೊಂಡು ನೂತನ ವಧು-ವರರಿಗೆ ಹಾಗೂ ಸಂಘಟಕರಿಗೆ ಶುಭ ಹಾರೈಸಿದರು.
ಸಚಿವ ರಮಾನಾಥ ರೈ ಅವರು ಬ್ಯಾರಿ ಭಾಷೆಯಲ್ಲಿ ಭಾಷಣ ಮಾಡಿರುವುದು ಎಲ್ಲರ ಗಮನಸೆಳೆದರು.

ಸೈಯದ್ ಹುಸೇನ್ ಅವರು ದುಷಾ ನೆರವೇರಿಸಿದರು. ಬೊಳ್ಳೂರು ಖತೀಬರಾದ ಮೊಹಮ್ಮದ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಸೂರಲ್ಪಾಡಿ ಮಸೀದಿಯ ಅಧ್ಯಕ್ಷ ಕೆ.ಶೇಕ್ ಅಬ್ಬಾಸ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧರು.
ಶಾಸಕ ಬಿ.ಎ ಮೊೈದಿನ್ ಬಾವಾ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ-*ಜನಸಾಮನ್ಯರಿಗೆ ಪ್ರಿಯವಾಗುವ ಸಾಮಜಿಕ ಮಾತನಡಿ-*ಜನಸಾಮನ್ಯರಿಗೆ ಪ್ರಿಯವಾಗುವ ಸಾಮಜಿಕ ಸೇವಾ ಕಾರ್ಯಗಳನ್ನು ಎಲ್ಲರೂ, ದೇವರು ಕೂಡಾ ಮೆಚ್ಚುತ್ತಾರೆ. ಉತ್ತಮ ಉದ್ದೇಶವುಳ್ಳÀ ಸೇವಾ ಕಾರ್ಯಗಳಿಗೆ ಸಂಪನ್ಮೂಲದ ಕೊರತೆಯಾಗದಂತೆ ಎಲ್ಲರೂ ಕೈಜೋಡಿಸಬೇಕು. ಎಂದು ಹೇಳಿದರು
ಕೆ.ಐ ಅಬ್ದುಲ್ ಖಾದರ್ ದಾರಿಮಿ ಕುಕ್ಕೀಲ, ಸೂರಲ್ಪಾಡಿ ಮಸೀದಿ ಖರೀಬರಾದ ಶಾಫಿ ಇರ್ಫಾನಿ ಫೈಝಿ, ಕೇರಳದ ಸಯ್ಯದ್ ಅಲಿ ತಂಙಳ್ ಮುಂತಾದವರು ಉಪಸ್ಥಿತರಿದ್ಧರು.
ಸೂರಲ್ಪಾಡಿ ಮಸೀದಿ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ಮಜೀದ್ ಪ್ರಾಸ್ತವಿಕ ಮಾತನಾಡಿದರು.
ಸಾಮೂಹಿಕ ವಿವಾಹದಲ್ಲಿ ದ.ಕ ಜಿಲ್ಲೆಯ 9 ಜೋಡಿಗೆ ಧಾರ್ಮಿಕ ಸಾಂಪ್ರದಾಯಿಕ ವಿಪೂರ್ವಕ ದಫ್‍ನೊಂದಿಗೆ ವಿವಾಹ ಸಂಭ್ರಮ ಜರಗಿತು.
ಇರ್ಫಾನ್ ಉಸ್ತಾದ್ ಕಾರ್ಯಕ್ರಮ ನಿರೂಪಿಸಿದರು.
