ಸುದ್ದಿ9ಮೂಲ್ಕಿ:ಇಲ್ಲಿನ ಮೂಲ್ಕಿಯ ನಿಟ್ಟೆ ವಿದ್ಯಾ ಸಂಸ್ಥೆಯ ಅಧೀನದ ತೋಕೂರು ತಪೋವನದ ಡಾ. ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯು 2013-14 ನೇ ಸಾಲಿನ ಸಿಬಿಎಸ್ಇ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದಿದೆ.
ಶಾಲೆಯ ಒಟ್ಟು 33 ವಿದ್ಯಾಥರ್ಿಗಳು ಪರೀಕ್ಷೆಗೆ ಹಾಜರಾಗಿದ್ದು ಅವರಲ್ಲಿ 2 ವಿದ್ಯಾಥರ್ಿಗಳು ವಿಶಿಷ್ಟ ಶ್ರೇಣಿಯಲ್ಲಿ(10 ಸಿ.ಜಿ.ಪಿ.ಎ), 3 ವಿದ್ಯಾಥರ್ಿಗಳು ಅತ್ಯುನ್ನತ ಶ್ರೇಣಿಯಲ್ಲಿ (9 ಕ್ಕೂ ಹೆಚ್ಚು ಸಿ.ಜಿ.ಪಿ.ಎ), ಉಳಿದವರು ಉತ್ತಮ ದಜರ್ೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಹಳೆಯಂಗಡಿಯ ಕೃಷಿಕ ರಘುರಾಮ ಶೆಟ್ಟಿ ಹಾಗೂ ವಿನಯಾ ದಂಪತಿಗಳ ಪುತ್ರಿ ವಿಜಿತಾ ಹಾಗೂ ಎಸ್.ಕೋಡಿ ಪುನರೂರು ಅಗ್ರಹಾರದ ನಿವಾಸಿ ಶಾಲಾ ಶಿಕ್ಷಕಿಯಾಗಿರುವ ಸುಜಾತಾ ಉಪಾಧ್ಯಾಯರ ಪುತ್ರಿ ಮಯೂರಿ ಬಿ. ಉಪಾಧ್ಯಾಯ ಇಬ್ಬರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಗೆ ವಿಶೇಷ ಗೌರವ ತಂದು ಕೊಟ್ಟಿದ್ದು ಇವರಿಬ್ಬರು ಸಹ ಯಾವುದೇ ರೀತಿಯ ಹೆಚ್ಚುವರಿ ಟ್ಯೂಷನ್ಗೆ ಹೋಗದೇ ಶಾಲೆಯಲ್ಲಿ ಕಲಿತ ಪಾಠಗಳನ್ನೇ ಉತ್ತಮವಾಗಿ ಕಲಿತು ತಮ್ಮ ಸಾಧನೆಯನ್ನು ಮಾಡಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ ಸತ್ಕಾರ್ ಉದಯ ಶೆಟ್ಟಿ ಶಿಮಂತೂರು ಹಾಗೂ ಫಾತಿಮಾ ಉರೂಸರವರು ಉತ್ತೀರ್ಣರಾಗಿದ್ದಾರೆ ಎಂದು ಶಾಲಾ ಪ್ರಾಂಶುಪಾಲೆ ಶ್ರೀಲತಾರಾವ್ ತಿಳಿಸಿದ್ದಾರೆ.
ಶಾಲೆಯ ಸಾಧನೆಯನ್ನು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಡಾ.ಕೃಷ್ಣರವರು ಅಭಿನಂದಿಸಿದ್ದಾರೆ.


