ಬಜ್ಪೆ: ಪಾರ್ಥೇನಿಯಂ ಹೂವಿನಂತೆಯೇ ಇರುವ, ನಾನಾ ಕೊಂಬುಗಳಿಂತಿರುವ ವಿಚಿತ್ರವಾದ ಕೀಟವೊಂದು ಪತ್ತೆಯಾದ ಘಟನೆ ಗುರುಪುರ ಕೈಕಂಬ ಸಮೀಪದ ಮಳಲಿಗೆ ಹೋಗುವ ಗುಡ್ಡದಲ್ಲಿ ನಡೆದಿದೆ.

???????????????????????????????

???????????????????????????????

???????????????????????????????

???????????????????????????????

???????????????????????????????ಥೇಟ್ ಪಾರ್ಥೇನಿಯಂ ಹೂವಿನಂತೆಯೇ ಕಾಣುವ ಈ ವಿಚಿತ್ರ ಕೀಟ ಅಚ್ಚ ಬಿಳಿ ಬಣ್ಣ ಹೊಂದಿದ್ದು, ಮುಖದ ಬಳಿ ಕಪ್ಪು ಬಣ್ಣದ ಪಟ್ಟಿಯಂಥಾ ರಚನೆ ಇದೆ. ಅದರ ಮುಖ ಕುರೂಪವಾಗಿದ್ದು ಸೂಕ್ಷ್ಮವಾಗಿ ನೋಡಿದರೆ ಭಯಹುಟ್ಟಿಸುತ್ತದೆ. ಅದರ ಮೈ ಮೇಲೆ ಹಲವು ಬಿಳಿ ಬಣ್ಣದ ಕೂದಲಿನಂಥಾ ರಚನೆ ಹೊಂದಿದ್ದು, ಮುಟ್ಟಿದಾಗ ಬೂದಿಯಂತೆ ಹಾರಿಹೋಗುತ್ತದೆ. ಆದರೆ ಅದರ ದೇಹ ಕಲ್ಲಿನಷ್ಟು ಕಟ್ಟಿಯಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಕೀಟ ಹಾರಿ ಹೋಗಿ ಪಾರ್ಥೇನಿಯಂ ಗಿಡ ಇರುವ ಸಮೀಪದಲ್ಲಿರುವ ಒಂದು ಬಗೆಯ ಬಿಳಿನ ಮೇಲೆ ಸಾಲಾಗಿ ಕುಳಿತುಕೊಳ್ಳುತ್ತದೆ. ಪಾರ್ಥೇನಿಯಂ ಗಿಡದ ಪಕ್ಕದಲ್ಲೇ ಅದೇ ತರ ಸಾಲಿನಲ್ಲೇ ಕುಳಿತುಕೊಳ್ಳುವುದರಿಂದ ತಕ್ಷಣ ನೋಡುವಾಗ ಅದು ಪಾರ್ಥೇನಿಯಂ ಹೂವಿನಂತೆ ಕಾಣುತ್ತದೆ. ಅಲ್ಲದೆ ಇದು ಹಾರಿದಾಗ ಸೃಷ್ಟಿಯಾದ ಒಂದು ಬಗೆಯ  ಬಿಳಿ ಬಣ್ಣದ ಬೂದಿ ಹತ್ತಿರದಲ್ಲೇ ಬಿದ್ದಿರುವುದು ಕಾಣುತ್ತಿದೆ. ಹೋಗೆ ಹಲವಾರು ಕೌತುಕಕ್ಕೆ ಕಾರಣವಾಗುವ `ಪಾರ್ಥೇನಿಯಂ ಕೀಟ’ದ ಬಗ್ಗೆ ಕೀಟಶಾಸ್ತ್ರಜ್ಞರು ಸೂಕ್ತ ಅಧ್ಯಯನ ನಡೆಸಿ ಗೊಂದಲಗಳನ್ನು ನಿವಾರಿಸುವ ಅಗತ್ಯವಿದೆ ಎಂದು ಪರಿಸರ ಪ್ರಿಯರು ಅಭಿಪ್ರಾಯ ಪಟ್ಟಿದ್ದಾರೆ.

By suddi9

Leave a Reply

Your email address will not be published. Required fields are marked *