ಬಜ್ಪೆ: ಟ್ಯಾಂಕಿಯೊಂದರಲ್ಲಿ ವ್ಯಕ್ತಿಯೋರ್ವರ ಶವ ಪತ್ತೆಯಾದ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಶಾಂತಿಗುಡ್ಡೆ ಎಂಬಲ್ಲಿ ನಡೆದಿದ್ದು ಕೊಲೆಯೋ, ಆತ್ಮಹತ್ಯೆಯೋ ಎಂಬ ಜಿಜ್ಞಾಸೆ ಹುಟ್ಟಿಕೊಂಡಿದ್ದು, ಅನುಮಾನಕ್ಕೆ ಕಾರಣವಾಗಿದೆ. ಮೃತ ವ್ಯಕ್ತಿಯನ್ನು ಕಳವಾರು ನಿವಾಸಿ ಸದಾಶಿವ ಶೆಟ್ಟಿ(46) ಎಂದು ಗುರುತಿಸಲಾಗಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಸಾರ್ವಜನಿಕ ಟ್ಯಾಂಕ್‍ಗೆ ಇವರು ಬಿದ್ದಿರುವ ಶಂಕೆ ವ್ಯಕ್ತೆಯಾಗಿದ್ದು, ಮೃತದೇಹ ಸಂಪೂರ್ಣವಾಗಿ ಕೊಳೆತುಹೋಗಿದೆ. ಟ್ಯಾಂಕಿಯ ಸಮೀಪ ಒಂದು ಜೊತೆ ಚಪ್ಪಲಿ ಕಂಡು ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಅನುಮಾನದಿಂದ ಟ್ಯಾಂಕಿಯನ್ನು ಹತ್ತಿ ಹುಡುಕಾಡಿದಾಗ ಶವ ಪತ್ತೆಯಾಗಿದ್ದು, ಸಂಪೂರ್ಣವಾಗಿ ಕೊಳೆತುಹೋಗಿದೆ. ಇವರು ಯಾಕಾಗಿ ಮೃತಪಟ್ಟಿದ್ದಾರೆ, ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಯಾರಾದರೂ ಕೊಲೆ ನಡೆಸಿ ಶವವವನ್ನು ಟ್ಯಾಂಕಿಗೆ ಎಸೆದಿದ್ದಾರೋ ಇತ್ಯಾದಿ ಅನುಮಾನ ಸೃಷ್ಟಿಯಾಗಿದೆ. ಬಜ್ಪೆ ಪೊಲೀಸರು ಸ್ಥಳಕ್ಕೆ ಧಾವಿಸಿ ಶವವ್ನು ಮೇಲಕ್ಕೆತ್ತುವ ಕೆಲಸ ಮಾಡುತ್ತಿದ್ದು, ತನಿಖೆ ನಡೆಸುತ್ತಿದ್ದಾರೆ.
