ಬಜಪೆ: ಕೇವಲ ಉದ್ಯೋಗ ಪಡೆಯುವುದೇ ಶಿಕ್ಷಣದ ಉದ್ಧೇಶವಾಗಿರದೆ ಉತ್ತಮ ರಾಷ್ಟ್ರ ನಿರ್ಮಾಣದ ಸಲುವಾಗಿ ಸವಾಲುಗಳನ್ನೆದುರಿಸುವ ಪರಮ ಗುರಿ ಯುವ ವಿದ್ಯಾರ್ಥಿಗಳಲ್ಲಿರಬೇಕು.ಎಂದು ಅರಣ್ಯ ಜೀವಿಶಾಸ್ತ್ರ ಪರಿಸರ ಖಾತೆ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.

ಕೆಂಜಾರು ಶ್ರೀದೇವೀ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ಪ್ರಧಾನ ಘಟಿಕೋತ್ಸವ ಸಮರಂಭದಲ್ಲಿ ಪದವಿ ಪ್ರದಾನ ಮಾಡಿ ಶುಭ ಹಾರೈಸಿದರು. ಈ ಸಂದರ್ಭ ಎಂಜಿನಿಯರಿಂಗ್, ಎಂಬಿಎ, ಎಂಸಿಎ, ಎಂಟೆಕ್ ವಿಭಾಗಗಳ ಸುಮಾರು 350ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿಪ್ರದಾನ ಮಾಡಲಾಯಿತು.
ಮಂಗಳೂರಿನ ನಿಟ್ಟೆ ಯೂನಿವರ್ಸಿಟಿಯ ರಿಜಿಸ್ಟ್ರಾರ್ ಎಂ.ಎಸ್. ಮೂಡಿತ್ತಾಯ ಅವರು ದಿಕ್ಸೂಚಿ ಭಾಷಣಗೈದು-ಬದುಕು ಕೇವಲ ಪರೀಕ್ಷೆ ಅಂಕಗಳಿಗಷ್ಟೆ ಸೀಮಿತಗೊಂಡು ಸಂಕುಚಿತಗೊಳ್ಳಬಾರದು. ಸಂತ್ರಪ್ತ ಬದುಕನ್ನು ಕಂಡುಕೊಳ್ಳುವಲ್ಲಿ ಉತ್ತಮ ಶಿಕ್ಷಣ ದಾರಿದೀಪವಾಗಬಲ್ಲದು. ಶ್ರದ್ಧೆಯಿಂದ ಯೋಗ್ಯತೆಗಳಿಸಿದಾಗ ಸಂಪನ್ಮೂಲ ತಾನಾಗಿಯೇ ಪ್ರಾಪ್ತಿಯಾಗುತ್ತದೆ. ಶ್ರದ್ಧೆ ಹಗೂ ನಿಷ್ಠೆಯಿಂದ ಶ್ರಮವಹಿಸಿ ಸವಾಲುಗಳನ್ನೆದುರಿಸಿದಾಗ ಯಶಸ್ಸು ಖಂಡಿತಾ ಲಭಿಸುತ್ತದೆ ಎಂದು ಹೇಳಿದರು.
ಕೆಂಜಾರು ಶ್ರೀ ದೇವೀ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಇಲ್ಲಿನ ಪ್ರಿನ್ಸಿಪಾಲ್ ಡಾ|ದಿಲೀಪ್ ಕುಮರ್ ಅವರು ಪದವಿ ಪ್ರದಾನದ ಪ್ರತಿಜ್ಷಾ ವಿ ಭೋಸಿದರು.
ಶ್ರೀ ದೇವೀ ಎಜುಕೇಶನ್ ಟ್ರ್ರಸ್ಟ್‍ನ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ಧರು. ಟ್ರಸ್ಟ್‍ನ ಉಪಾಧ್ಯಕ್ಷ ನಿದೀಶ್ ಎಸ್.ಶೆಟ್ಟಿ, ಕಾರ್ಯದರ್ಶಿ ಮೈನಾ ಎಸ್.ಶೆಟ್ಟಿ, ಟ್ರಸ್ಟಿ ಪ್ರಿಯಾಂಕಾ ಎನ್ .ಶೆಟ್ಟಿ, ನಾನಾ ವಿಭಾಗಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ಧರು.
