ಲಖನೌ: ನಾನು ರೋಹಿತ್ ಶೇಖರನ ಅಪ್ಪ ಎಂದು ಒಪ್ಪಿಕೊಂಡಿದ್ದ ಕಾಂಗ್ರೆಸ್ ಮುಖಂಡ ಎನ್ಡಿ ತಿವಾರಿ ಆತನ ತಾಯಿ ಉಜ್ವಲಾ ಶಮರ್ಾ ಎಂಬವರನ್ನು ತನ್ನ 88ನೇ ಇಳಿ ವಯಸ್ಸಿನಲ್ಲಿ ಮದುವೆಯಾಗಿದ್ದಾರೆ. ಉಜ್ವಲಾ ಶಮರ್ಾ ಯಾರೆಂಬುದೇ ನನಗೆ ಗೊತ್ತಿಲ್ಲ, ಆಕೆಗೂ ನನಗೂ ಯಾವುದೇ ಸಂಬಂಧ ಇಲ್ಲ, ಆಕೆಯ ಪುತ್ರ ರೋಹಿತ್ ಶೇಖರ್ ಜನನಕ್ಕೆ ನಾನು ಕಾರಣನಲ್ಲ ಎಂದು ತಿವಾರಿ ಮೊಂಡುತನ ಪ್ರದಶರ್ಿಸಿದ್ದು ಭಾರೀ ಕೋಲಾಹಲ ಸೃಷ್ಟಿಸಿತ್ತು.

ಕಳೆದ ಮೂನರ್ಾಲ್ಕು ವರ್ಷಗಳಿಂದ ಕೋಟರ್್ನಲ್ಲಿ ಹೋರಾಟ ನಡೆಸಿದ್ದರೋಹತ್ ಶೇಖರ್ ಡಿಎನ್ಎ ಪರೀಕ್ಷೆಯಲ್ಲೂ ತಿವಾರಿಯೇ ತನ್ನ ತಂದೆ ಎಂದು ಸಾಬೀತುಪಡಿಸಿದ್ದರು.ಬಳಿಕ ಇತ್ತೀಚೆಗೆ ರೋಹಿತ್ನನ್ನು ಮನೆಗೆ ಕರೆಸಿ, ನನ್ನ ಪುತ್ರನೆಂದು ಮಾಧ್ಯಮಗಳ ಮುಂದೆ ತಿವಾರಿ ಒಪ್ಪಿಕೊಂಡಿದ್ದರು. ಇದೀಗ ರೋಹಿತ್ ಶೇಖರ್ ತಾಯಿ ಉಜ್ವಲಾ ಶಮರ್ಾರನ್ನ ವಿವಾಹವಾಗಿರುವ ಎನ್.ಡಿ. ತಿವಾರಿ ಎಲ್ಲ ವಿವಾದಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ತನ್ನ ತಂದೆ ತಾಯಿ ಮದುವೆಗೆ ಮಗ ರೋಹತ್ ಶೇಖರ್ ಶುಭ ಹಾರೈಸಿದ್ದಾರೆ
