ಲಂಡನ್: ತಮ್ಮ ಮಗನ ನಡವಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಮಹಾತ್ಮಾ ಗಾಂಧೀಜಿ ಬರೆದಿದ್ದರೆನ್ನಲಾದ ಮೂರು ಪತ್ರಗಳು ಮೇ 22ರಂದು ಬ್ರಿಟನ್ನಿನ ಮುಲ್ಲೋಕ್ಸ್ ಹಿಸ್ಟಾರಿಕಲ್ ಡಾಕ್ಯುಮೆಂಟ್ಸ್ ಸೇಲ್ಸ್ನಲ್ಲಿ ಹರಾಜಾಗಲಿವೆ. ಈ ಮೂರೂ ಪತ್ರಗಳು 50ರಿಂದ 60 ಸಾವಿರ ಪೌಂಡ್(50-60 ಲಕ್ಷ) ಮಾರಾಟವಾಗುವ ನಿರೀಕ್ಷೆ ಇದೆ.
ಮಹಾತ್ಮಾಗಾಂಧಿ ಜೂನ್ 1935ರಲ್ಲಿ ಈ ಪತ್ರಗಳನ್ನ ಬರೆದಿದ್ದು, ತಮ್ಮ ಮಗ ಹರಿಲಾಲ್ ಗಾಂಧಿ ನಡವಳಿಕೆ ಬಗ್ಗೆ ಪತ್ರದಲ್ಲಿ ಕಿಡಿ ಕಾರಿದ್ದಾರೆ. `ನಿನ್ನ ಸಮಸ್ಯೆಯನ್ನ ನೀನು ಅರಿತುಕೊಳ್ಳಬೇಕು,ನಿನ್ನಿಂದ ನನಗೂ ಮತ್ತು ದೇಶದ ಸ್ವಾಂತ್ರತ್ರ್ಯ ಹೋರಾಟಕ್ಕೂ ತೊಡಕುಂಟಾಗುತ್ತಿದೆ.
`ನಿನ್ನ ಹಲವು ಅಪಾಯಕಾರಿ ಸಂಗತಿಗಳ ಬಗ್ಗೆ ಮನು ನನ್ನ ಬಳಿ ತಿಳಿಸಿದ್ದಾಳೆ. 8 ವರ್ಷಗಳ ಹಿಂದೆ ನೀನು ಅವಳ ಮೇಲೆ ಅತ್ಯಾಚಾರ ನಡೆಸಿದ್ದೀಯಾ, ಅದರಿಂದ ತೀವ್ರ ಅಸ್ವಸ್ಥಳಾಗಿ ವೈದ್ಯಕೀಯ ಚಿಕಿತ್ಸೆ ಪಡೆದು ಬಂದಿದ್ದಾಳೆ’ ಎಂದು ಮಹಾತ್ಮಾ ಗಾಂಧಿ ಮಗನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

gi

g
ಈ ಮೂರೂ ಪತ್ರಗಳನ್ನ ಗುಜರಾತಿ ಭಾಷೆಯಲ್ಲಿ ಬರೆಯಲಾಗಿದ್ದು, ಈಗಲೂ ಉತ್ತಮ ಸ್ಥಿತಿಯಲ್ಲಿವೆ. ಗಾಂಧಿ ಕುಟುಂಬದ ಸಂಬಂಧಿಗಳ ಮೂಲಕ ಈ ಪತ್ರಗಳು ಹರಾಜುದಾರನ ಕೈಸೇರಿವೆಯಂತೆ. ಈ ಪತ್ರಗಳು ಮಹಾತ್ಮಾ ಗಾಂಧಿ ಮತ್ತು ಅವರ ಪುತ್ರ ಹರಿಲಾಲ್ ನಡುವಿನ ಸಂಬಂಧ ಹೇಗಿತ್ತು ಎಂಬುದರ ಬಗ್ಗೆ ಬೆಳಕು ಚೆಲ್ಲಿವೆ.
ಹರಿಲಾಲ್ ತಂದೆಯ ರೀತಿ ಇಂಗ್ಲೆಂಡ್`ಗೆ ತೆರಳಿ ಬ್ಯಾರಿಸ್ಟರ್ ಪದವಿ ಪಡೆಯಲು ಇಚ್ಛಿಸಿದ್ದರಂತೆ. ಆದರೆ, ಇದನ್ನ ಬಲವಾಗಿ ವಿರೋಧಿಸಿದ್ದ ಮಹಾತ್ಮಾ ಗಾಂಧಿ, ಪಾಶ್ಚಿಮಾತ್ಯ ಶಿಕ್ಷಣ ಬ್ರಿಟಿಷರ ವಿರುದ್ಧ ಹೋರಾಡಲು ನಮಗೆ ನೆರವಾಗುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರಂತೆ. 1911ರಲ್ಲಿ ಕುಟುಂಬದ ಸಖ್ಯ ತೊರೆದಿದ್ದ ಹರಿಲಾಲ್, ಜೀವನಪೂತರ್ಿ ತನ್ನ ತಂದೆಯ ಜೊತೆ ಉತ್ತಮ ಸಂಬಂಧ ಹೊಂದಿರಲಿಲ್ಲವಂತೆ.
`ದಯವಿಟ್ಟು ನನಗೆ ಶುದ್ಧವಾದ ಸತ್ಯವನ್ನ ಹೇಳು, ನೀನು ಈಗಲೂ ಮದ್ಯಪಾನ, ವ್ಯಭಿಚಾರದ ಬಗ್ಗೆ ಆಸಕ್ತಿ ಇಟ್ಟುಕೊಂಡಿದ್ದೀಯಾ, ಮದ್ಯವ್ಯಸನಿಯಾಗಿ ಬದುಕುವುದಕ್ಕಿಂತ ನೀನು ಸಾಯುವುದೇ ಮೇಲು’. ಎಂದು ಮತ್ತೊಂದು ಪತ್ರದಲ್ಲಿ ಮಹಾತ್ಮಾ ಗಾಂಧೀಜಿ ತಮ್ಮ ಮಗನ ವಿರುದ್ಧ ಕಿಡಿ ಕಾರಿದ್ದಾರೆ ಎನ್ನಲಾಗಿದೆ.

By suddi9

Leave a Reply

Your email address will not be published. Required fields are marked *