ಜಿನಿವಾ: ಮೊಘಲರ ಕಾಲದ ಅಪರೂಪದ ಮಣಿಗಳಿಂದ ತಯಾರಿಸಿದ ನೆಕ್ಲೆಸ್ ಮತ್ತು ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಅಪರೂಪದ ನೀಲಿ ವಜ್ರವನ್ನ ನ್ನ ಸ್ವಿಟ್ಜರ್`ಲಾಂಡಿನ ಜೀನಿವಾದ ಮ್ಯಾಗ್ನಿಫಿಸೆಂಟ್ ಜ್ಯುವಲ್ಸ್ ಸೇಲ್`ನಲ್ಲಿ ಇಂದು ಹರಾಜಿಗೆ ಇಡಲಾಗುತ್ತಿದೆ. ಇದು 17ನೇ ಶತಮಾನದ ಮೊಘಲರ ಕಾಲದ ಅಪರೂಪದ ಹವಳಗಳಿಂದ ತಯಾರಿಸಿದ ಕಂಠಿಹಾರವಾಗಿದ್ದು, ಇದರ ಮೇಲೆ ಅಕ್ಬರ್ ಮತ್ತು ಜಹಾಂಗೀರ್ ಹೆಸರನ್ನ ಕೆತ್ತಲಾಗಿದೆಯಂತೆ.

mughal nekles2 mughal nekles

ಇತಿಹಾಸ ಪ್ರಸಿದ್ಧ ಈ ಕಂಠೀಹಾರ ಸುಮಾರು 1 ಕೋಟಿ ರೂಪಾಯಿಗೆ ಮಾರಾಟವಾಗುವ ನಿರೀಕ್ಷೆ ಇದೆ. ವಜ್ರ, ವೈಢೂರ್ಯ, ಹವಳಗಳ ಬಗ್ಗೆ ಹೆಚ್ಚು ಆಸಕ್ತರಾಗಿದ್ದ ಮೊಘಲರ ಅವುಗಳ ಕಂಠಿಹಾರ ಧರಿಸುವುದನ್ನ ಪ್ರತಿಷ್ಠಯಾಗಿ ಪರಿಗಣಿಸುತ್ತಿದ್ದರು. ಹೀಗಾಗಿ, ಅಪರೂಪದ ಹವಳಗಳನ್ನ ಸಂಗ್ರಹಿಸಿ ಹಾರ ಮಾಡಿಸಿಕೊಳ್ಳುತ್ತಿದ್ದರು.ಖತಾರ್`ನ ಮ್ಯೂಸಿಯಂ ಆಫ್ ಇಸ್ಲಾಮಿಕ್ ಆರ್ಟ್ ಈ ಕಂಠೀಹಾರವನ್ನ ಹರಾಜಿಗಿಟ್ಟಿದ್ದು, 877.23 ಕ್ಯಾರೆಟ್`ನ ಈ ಕಂಠೀಹಾರದಲ್ಲಿ ಮೊಘಲರ ಕಾಲದ ಅಪರೂಪದ 11 ಹವಳಗಳಿದ್ದು, ಮೂರರಲ್ಲಿ ಮೊಘಲ್ ದೊರೆಗಳ ಹೆಸರನ್ನ ಕೆತ್ತಲಾಗಿದೆ. ಇದರ ಜೊತೆಗೆ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಅಪರೂಪದ ದು ನೀಲಿ ವಜ್ರವೊಂದನ್ನು ಸಹ ಇಂದು ಹರಾಜಿಗಿಡಲಾಗಿದೆ. ಈ ವಜ್ರ ಸುಮಾರು 500 ಕೋಟಿಗೆ ಮಾರಾಟವಾಗುವ ನಿರೀಕ್ಷೆ ಇದೆ.

By suddi9

Leave a Reply

Your email address will not be published. Required fields are marked *