ಬೆಂಗಳೂರು: ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳವರ ಮೇಲೆ ಸಾರ್ವಜನಕ ಹಿತಾಸಕ್ತಿ ಅರ್ಜಿ ದಾಖಲಿಸಿ ಬ್ಲ್ಯಾಕ್ ಮೇಲ್ ನಡೆಸಿದ ಆರೋಪದಲ್ಲಿ ಬಂಧಿತನಾಗಿದ್ದ ಚಂದನ್ ಎಂ.ಸಿ. ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸೋಮವಾರ ಬೆಂಗಳೂರಿನ ಒಂದನೇ ಎಸಿಸಿಎಂ ವಜಾಗೊಳಿಸಿದೆ.

ಆರೋಪಿ ಚಂದನ್ ಮಡಿಕೇರಿಯಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿಯಾಗಿದ್ದು, ಈತ ಗೋಕರ್ಣದ ಗೋಕರ್ಣ ಹಿತರಕ್ಷಣಾ ಸಮಿತಿ ಎಂಬ ಸಮಿತಿಯ ಜೊತೆಗೂಡಿ ಶ್ರೀ ರಾಮಚಂದ್ರಾಪುರಮಠದ ವಿರುದ್ಧ ಸ್ವಾಮೀಜಿಗಳ ವಿರುದ್ಧ ಹಲವಾರು ಮೊಕದ್ದಮೆಗಳನ್ನು ವಿವಿಧ ನ್ಯಾಯಾಲಯಗಳಲ್ಲಿ ದಾಖಲಿಸಿರುವದಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಆ ಬಳಿಕ ಅವುಗಳನ್ನು ಹಿಂತೆಗೆಯಲು ಕೋಟಿ ರೂಪಾಯಿ ಬೇಡಿಕೆ ಇಟ್ಟು ಬ್ಲಾಕ್ಮೇಲ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ.

ಈ ಪ್ರಕರಣದಲ್ಲಿ ಗೋಕರ್ಣ ಹಿತರಕ್ಷಣಾ ಸಮಿತಿಯ ಇತರ ಆರೋಪಿಗಳಾದ ರಾಜಗೋಪಾಲ ಅಡಿ, ಗೋಪಾಲ ಗಾಯತ್ರಿ, ಶೇಷಾನಂದ ಅಡಿ, ಅಮಿತ್ ನಾಡಕರ್ಣಿ ಇವರುಗಳು ತಲೆಮರೆಸಿಕೊಂಡಿದ್ದು, ಇವರ ನರೀಕ್ಷಣಾ ಅರ್ಜಿ ಮೇ 7ರಂದು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಈ ಪ್ರಕರಣದಲ್ಲಿ ದೂರುದಾರರಾದ ಮಠದ ಪರವಾಗಿ ವಕೀಲರುಗಳಾದ ರಾಜೇಶ ರೈ, ಸುಭಾಷ್ ಕವಡಿಚಾರ್, ರವೀಶ ಪಿ. ಹಾಗೂ ಆನಂದಮೂರ್ತಿ ವಾದಿಸಿದ್ದರು

By suddi9

Leave a Reply

Your email address will not be published. Required fields are marked *