ನವದೆಹಲಿ: ಲೋಕಸಭೆಗೆ ಇಂದು 8ನೇ ಹಂತದ ಮತದಾನ ನಡೆಯುತ್ತಿದೆ. ಒಟ್ಟು 7 ರಾಜ್ಯಗಳ 64 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಘಟಾನುಘಟಿಗಳ ಭವಿಷ್ಯ ನಿರ್ಧಾರವಾಲಿದೆ. ರಾಹುಲ್ ಗಾಂಧಿ, ವರುಣ್ ಗಾಂಧಿ, ಸಮ್ಋತಿ ಇರಾನಿ, ರಾಮ್ ವಿಲಾಸ್ ಪಾಸ್ವಾನ್ ಸೇರಿದಂತೆ ಘಟಾನುಘಟಿಗಳ ಭವಿಷ್ಉ ಮತಪೆಟ್ಟಿಗೆ ಸೇರಲಿದೆ.

smri

rhl
8ನೇ ಹಂತದ ಚುನಾವಣೆಯಲ್ಲಿ ಆಂಧ್ರ ಪ್ರದೇಶದ 25, ಉತ್ತರ ಪ್ರದೇಶದ 15, ಬಿಹಾರದ 07, ಪಶ್ಚಿಮ ಬಂಗಾಳದ 06, ಉತ್ತರಾಖಂಡದ 05, ಹಿಮಾಚಲ ಪ್ರದೇಶದ 04 ಹಾಗೂ ಜಮ್ಮುಕಾಶ್ಮೀರದ 02 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

ಇನ್ನೂ ಇಂದಿನ ಮತದಾನದಲ್ಲಿ ಗಮನ ಸೆಳೆದಿರೋ ಕ್ಷೇತ್ರವೆಂದ್ರೆ ಅಮೇಥಿ. ರಾಹುಲ್​ ಗಾಂಧಿ ಸ್ಪರ್ಧಿಸಿರೋ ಈ ಕ್ಷೇತ್ರದಲ್ಲಿ ಮತದಾರರು ರಾಹುಲ್​ ಭವಿಷ್ಯ ಬರೆಯಲಿದ್ದಾರೆ. ರಾಹುಲ್​​ಗೆ ಬಿಜೆಪಿಯ ಸ್ಮೃತಿ ಇರಾನಿ ಪ್ರಬಲ ಪೈಪೋಟಿ ಕೊಟ್ಟಿದ್ದಾರೆ. ಇನ್ನು ಇಬ್ಬರು ಪ್ರಬಲ ಅಭ್ಯರ್ಥಿಗಳಿಗೆ ಎಎಪಿಯ ಕುಮಾರ್​ ವಿಶ್ವಾಸ್​ ಸವಾಲ್​ ಹಾಕಿದ್ದಾರೆ.. ಹೀಗಾಗಿ, ಅಮೇಥಿ ಅಖಾಡ ಕುತೂಹಲ ಕೆರಳಿಸಿದೆ..

ಕಣದಲ್ಲಿರುವ ಘಟಾನುಘಟಿಗಳು: ಎಲ್​​ಜೆಪಿ ಮುಖ್ಯಸ್ಥ ರಾಮ್​ ವಿಲಾಸ್​ ಪಾಸ್ವನ್​, ಬಿಹಾರ ಮಾಜಿ ಸಿಎಂ ರಾಬ್ಡಿ ದೇವಿ, ಬಿಜೆಪಿ ಮುಖಂಡ ರಾಜೀವ್​ ಪ್ರತಾಪ್​ ರೂಡಿ ಕಣದಲ್ಲಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಅನುರಾಗ್​ ಸಿಂಗ್​ ಠಾಕೂರ್​, ಪ್ರತಿಭಾ ಸಿಂಗ್​ ಸ್ಪರ್ಧೆ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​​ ಮುಕಂಡ ಬೇನಿ ಪ್ರಸಾದ್​ ವರ್ಮಾ, ಕ್ರಿಕೆಟಿಗ ಮೊಹಮ್ಮದ್​ ಕೈಫ್, ಬಿಜೆಪಿ ವರುಣ್​​ ಗಾಂಧಿ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಇನ್ನು ಉತ್ತಾರಖಂಡದಲ್ಲಿ ಮಾಜಿ ಸಿಎಂ ರಮೇಶ್​ ಪೋಖ್ರಿಯಾಲ್​ ಹಾಗೂ ಸಿಎಂ ವಿಜಯ್​ ಬಹುಗುಣ ಪುತ್ರ ಸಾಕೇತ್​ ಬಹುಗುಣ ಿಂದಿನ ಚುನಾವಣಾ ಕಣದಲ್ಲಿದ್ದಾರೆ.

ಇನ್ನೂ ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲೆಡೆ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ. 7 ಹಂತಗಳಂತೆ 8ನೇ ಹಂತವೂ ಶಾಂತಿಯುತವಾಗಿ ನಡೆಯುತ್ತೆ ಅನ್ನೋ ವಿಶ್ವಾಸದಲ್ಲಿ ಚುನಾವಣಾ ಆಯೋಗ ಇದೆ. ಒಟ್ಟಾರೆ, 8ನೇ ಹಂತದ ಲೋಕ ಸಮರದಲ್ಲಿ ರಾಹುಲ್​ ಗಾಂಧಿ, ವರುಣ್ ಗಾಂಧಿ ಸೇರಿದಂತೆ ಹಲವು ಘಟಾನುಗಟಿಗಳ ರಾಜಕೀಯ ಭವಿಷ್ಯವನ್ನ ಮತದಾರರು ನಿರ್ಧರಿಸಲಿದ್ದಾರೆ.

By suddi9

Leave a Reply

Your email address will not be published. Required fields are marked *