ಸುಂಕದಕಟ್ಟೆಯಲ್ಲಿ *ಬೊಲ್ಪುದ ಪರ್ಬ-2015* ಸಂಭ್ರಮ

ಬಜಪೆ: ದೀಪಗಳ ಹಬ್ಬ ದೀಪಾವಳಿಗೆ ಸಂಭ್ರಮದ ಮುನ್ನುಡಿ. ರಂಗೋಲಿಗಳ ಚೆಲುವಿನ ಚಿತ್ತಾರ. ನವನವೀನ ಗೂಡುದೀಪಗಳ ಆಕರ್ಷಣೆ, ಮನಗಳಿಗೆ ಮುದ ನೀಡಿದ ಸಾಂಸ್ಕೃತಿಕ ವೈಭವ… ಸುಂಕದಕಟ್ಟೆಯ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಳದ ಸನ್ನಿಯಲ್ಲಿ ಸಂಪನ್ನಗೊಂಡ *ಬೊಲ್ಪುದ ಪರ್ಬ-2015*ರ ಸಂಭ್ರಮದ ಕ್ಷಣಗಳಿವು.

56 ಗೂಡುದೀಪಗಳು-64 ರಂಗೋಲಿಗಳು
ನಾಡಿನೆಲ್ಲೆಡೆಯ ಮಂದಿಗೆ ಮುಕ್ತ ಗೂಡುದೀಪ ಹಾಗೂ ರಂಗೋಲಿ ಪ್ರದರ್ಶನಕ್ಕೆ ನೀಡಲಾದ ಆಹ್ವಾನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪ್ರದರ್ಶನದಲ್ಲಿ ನವನವೀನ – ವೈವಿಧ್ಯಮಯ 56 ಗೂಡುದೀಪಗಳನ್ನು ವೇದಿಕೆಯ ಮಗ್ಗುಲಲ್ಲಿ ಸಾರ್ವಜನಿಕರ ವೀಕ್ಷಣೆಗೆ ಪ್ರದರ್ಶಿಸಲಾಗಿತ್ತು.
ದೇವಳದ ಅನ್ನಛತ್ರದಲ್ಲಿ ಸುಮಾರು 64 ಬಗೆಯ ರಂಗೋಲಿ ಚಿತ್ತಾರಗಳು ಹೂ-ಬಣ್ಣದ ಹುಡಿ-ಹಣತೆಗಳಿಂಡ ಅಲಂಕೃತಗೊಂಡು ಮನ ಸೆಳೆಯುತ್ತಿದ್ದವು.

1

2

7

8

9

11

ಸಾಂಸ್ಕೃತಿಕ ವೈಭವ:
ಸುಂಕದಕಟ್ಟೆಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಪ್ರತಿಭೆಗಳ ನೃತ್ಯ ವೈವಿಧ್ಯ. ಭಕ್ತಿ-ಭಾವಗೀತೆ, ಪೆರಾರ ರತ್ನಾಕರ ಜೋಗಿ ಬಳಗದ ಕೊಳಲು ವಾದನ, ಪಟ್ಲ ಸತೀಶ್ ಶೆಟ್ಟಿ ಬಳಗದ ಯಕ್ಷಗಾಯನ ಹಾಗೂ ಉದಯೋನ್ಮುಖ ಕಲಾವಿದರಿಂದ ಯಕ್ಷನಾಟ್ಯ, *ರಾಧಾ-ವಿಲಾಸ* – ಯಕ್ಷನಾಟ್ಯ ರೂಪಕ, ಅಲ್ಲದೆ ಸುಂಕದಕಟ್ಟೆಯ ಅವಳಿ ಸೋದರಿಯರಾದ ಶ್ರೇಯಾ ಸನಿಲ್ – ಶ್ರಾವ್ಯ ಸನಿಲ್ ಇವರ ಭರತನಾಟ್ಯ ವೈವಿಧ್ಯ ಬೊಲ್ಪುದ ಪರ್ಬದ ಮೆರುಗು ಹೆಚ್ಚಿಸಿತು.

3

4

10
ಸುಂಕದಕಟ್ಟೆ ದೇವಸ್ಥಾನ, ಶಿಕ್ಷಣ ಸಂಸ್ಥೆಗಳು, ಸಂಘ-ಸಂಸ್ಥೆಗಳೆಲ್ಲರÀ ಸಹಕಾರದೊಂದಿಗೆ *ಬೊಲ್ಪುದ ಪರ್ಬ* ಎಂಬ ಮಾದರಿ ಕಾರ್ಯಕ್ರಮದ ಯಶಸ್ಸಿನ ಹಿನ್ನಲೆಯಲ್ಲಿ ಗೂಡುದೀಪ ಕಲಾವಿದ ಹಾಗೂ ಕಾರ್ಯಕ್ರಮದ ಪ್ರಧಾನ ಸಂಘಟಕ ಜಗದೀಶ್ ಅಮೀನ್ ಸುಂಕದಕಟ್ಟೆ ಅವರ ಪರಿಶ್ರಮ ಉಲ್ಲೇಖನೀಯ. ಬೊಲ್ಪುದ ಪರ್ಬದಲ್ಲಿ ಪಾಲ್ಗೊಂಡ ಎಲ್ಲಾ ಕಲಾವಿದರನ್ನು ಸ್ಮರಣಿಕೆ ಸಹಿತ ಗೌರವಿಸಲಾಯಿತು.

By suddi9

Leave a Reply

Your email address will not be published. Required fields are marked *