* ಆಚರಣೆಗಳ ಮಹತ್ವ-ಮೌಲ್ಯಗಳನ್ನು ಪರಿಚಯಿಸಬೇಕು*
ಬಜಪೆ:*ಹಬ್ಬ ಹರಿದಿನಗಳ ಆಚರಣೆಗಳ ಮಹತ್ವ – ಸಾಂಸ್ಕøತಿಕ ಮೌಲ್ಯಗಳನ್ನು ಎಳೆಯರಿಗೆ, ಯುವಪೀಳಿಗೆಗೆ ಪರಿಚಯಿಸುವ ಹಾಗೂ ಅವುಗಳ ಪುನರ್ಮನದ ಮಾಡುವ ಅಗತ್ಯ ಬಹಳವಿದೆ. ಆಧುನಿಕತೆಯ ಧಾವಂತದಲ್ಲಿ ಆಚರಣೆಗಳ ಸಾಂಕೃತಿಕ ಮೌಲ್ಯಗಳು ಮರೆಯಾಗುವ ಮುನ್ನ, ಪುರಾತನ ಸಂಸ್ಕøತಿಯ ನೆನೆವರಿಕೆಯೊಂದಿಗೆ ಪರಿಚಯಾತ್ಮಕವಾಗಿ ಸಂಯೋಜಿಸುವುದು ಬಹಳ ಅಗತ್ಯ.* ಎಂದು ಜಾನಪದ ವಿದ್ವಾಂಸ ಡಾ| ಗಣೇಶ್ ಅಮೀನ್ ಸಂಕಮಾರ್ ಹೇಳಿದರು.
ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂಣೇಶ್ವರೀ ದೇವಸ್ಥಾನದ ಆಶ್ರಯದಲ್ಲಿ ಇಲ್ಲಿನ ಯಕ್ಷಮಿತ್ರರು, ಎಸ್‍ಎನ್‍ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ಸಂಯೋಜಿಸಿದ *ಬೊಲ್ಪುದ ಪರ್ಬ-2015*ರ ಸಮಾರೋಪ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು.

9vm Shabe

12
ನವನೀತ ಶೆಟ್ಟಿ ಕದ್ರಿ ಹಾಗೂ ನಮ್ಮ ಕುಡ್ಲದ ನಿರ್ದೇಶಕ ಲೀಲಾಕ್ಷ ಕರ್ಕೇರ, ಉದ್ಯಮಿ ದೀಪಕ್ ಕೋಟ್ಯಾನ್, ಯಕ್ಷಗಾನ ಕಲಾವಿದ ತಾರಾನಾಥ ಬಲ್ಯಾಯ ವರ್ಕಾಡಿ ಅವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ದೀಪಾವಳಿ ಆಚರಣೆಯ ಹಿನ್ನೆಲೆ ಹಾಗೂ ಸಾಂಸ್ಕøತಿಕ ಮೌಲ್ಯಗಳ ಕುರಿತಾಗಿ ಮಾತನಾಡಿದರು.
ದೇವಳದ ಆಡಳಿತ ಮಂಡಳಿಯ ಟ್ರಸ್ಟಿ ನಾರಯಣ ಪೂಜಾರಿ, ಸುಕುಮಾರ್ ಸಾಲ್ಯಾನ್, ಸುಖೇಶ್ ಮಾಗ್ವಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶೋಭಾರಾಣಿ, ಮುಂತಾದವರು ವೇದಿಕೆಯಲ್ಲಿದ್ದರು.
ಇದೇ ಸಂದರ್ಭ ಕಲಾಪೋಷಕರಾದ ದೀಪಕ್ ಕೋಟ್ಯಾನ್, ಮುರಳೀಧರ್ ಹಗೂ ವಿಶ್ವನಾಥ ಪೂಜಾರಿ ರೆಂಜಾಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗೂಡುದೀಪ, ರಂಗೋಲಿ ಪ್ರದರ್ಶನಗಳಲ್ಲಿ ಪಾಲ್ಗೊಂಡ ಎಲ್ಲಾ ಕಲಾವಿದರಿಗೂ ಸ್ಮರಣಿಕೆ ಸಹಿತ ಅಭಿನಂದಿಸಲಾಯಿತು.
ಕಲಾವಿದ ಹಾಗೂ ಕಾರ್ಯಕ್ರಮದ ಮುಖ್ಯ ಸಂಘಟಕ ಜಗದೀಶ ಅಮೀನ್ ಸುಂಕದಕಟ್ಟೆ ಅವರು ಉಪಸ್ಥಿತರಿದ್ಧರು.
ಪ್ರತಿಮಾ ಹಾಗೂ ಮಧ್ವರಾಜ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *