ಸುಂಕದಕಟ್ಟೆಯಲ್ಲಿ ಜರಗಿದ *ಬೊಲ್ಪುದ ಪರ್ಬ* ಸಂಭ್ರಮದಲ್ಲಿ ಸುಂಕದಕಟ್ಟೆಯ ಅವಳಿ ಸೋದರಿಯರಾದ *ಶ್ರೇಯಾ ಸನಿಲ್-ಶ್ರಾವ್ಯಾ ಸನಿಲ್* ಅವರ ಭರತನಾಟ್ಯ ಪ್ರದರ್ಶನ ಗಮನ ಸೆಳೆಯಿತು.
ಶಂಕರ್ ಎಸ್. ಹಾಗೂ ಸಂಧ್ಯಾ ಕುಳಾಯಿ ದಂಪತಿಯ ಅವಳಿ ಪುತ್ರಿಯರು ವಿದುಷಿ ಗೀತಾ ಸರಳಾಯವರ ಅವರ ಶಿಷ್ಯರಾಗಿದ್ದು ಭರತನಾಟ್ಯದ ಜೂನಿಯರ್-ಸಿನಿಯರ್ ಪರೀಕ್ಷೆಗಳಲ್ಲಿ ಅತ್ಯುನ್ನತ ದರ್ಜೆಯಲ್ಲಿ ಉತ್ತಿರ್ಣರಾಗಿರುತ್ತಾರೆ.

ಮಲೇಷ್ಯಾದ ಕೌಲಾಲಂಪುರದಲ್ಲಿ ವಿಶ್ವ ವಚನ ಸಾಹಿತ್ಯ ಸಮ್ಮೇಳನದಲ್ಲಿ ಗೀತಾ ಸರಳಾಯ ಅವರ ತಂಡವನ್ನು ಪ್ರತಿನಿಸಿದ್ದ ಈ ಅವಳಿ ಸೋದರಿಯರಿಗೆ *ನೃತ್ಯಶ್ರೀ* ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿರುತ್ತದೆ. ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ್ಧ ಶ್ರೇಯಾ-ಶ್ರಾವ್ಯ ಜೋಡಿಗೆ *ಅರಳು ಮಲ್ಲಿಗೆ* ರಾಜ್ಯ ಪ್ರಶಸ್ತಿಯಿಂದಲೂ ಪುರಸ್ಕøತರಾಗಿದ್ಧಾರೆ.
ನಾಡಿನಾದ್ಯಂತ ನೂರಾರು ಕಾರ್ಯಕ್ರಮಗಳನ್ನು ನೀಡಿ ಜನಮನಗೆದ್ಧ ಅವಳಿ ಸೋದರಿಯರಲ್ಲಿ ಶ್ರೇಯಾ ಕಟೀಲು ದೇವಳ ಪದವಿಪೂರ್ವ ಕಾಲೇಜಿನ ಸ್ವೀತಿಯ ಪಿಯುಸಿ ವಿದ್ಯಾರ್ಥಿನಿ ಹಾಗೂ ಶ್ರಾವ್ಯ ಮಂಗಳೂರಿನ ಕೆ.ಪಿ.ಟಿಯಲ್ಲಿ ಎರಡನೇ ವರ್ಷದ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿನಿ.
*ಬಲ್ಪುದ ಪರ್ಬ* ದಲ್ಲಿ ನೃತ್ಯ ಪ್ರದರ್ಶನ ನೀಡಿದ ಅವರನ್ನು ಈ ಸಂದರ್ಭ ಅಭಿನಂದಿಸಲಾಯಿತು.


