ಕೈಕಂಬ: ಬ್ಯಾಂಕ್ಗಳು ಸ್ವ ಸಹಾಯ ಸಂಘಗಳಿಗೆ ಪ್ರೇರಣೆ ನೀಡಬೇಕು. ಪ್ರತಿಯೊಬ್ಬ ಸದಸ್ಯರು ಸ್ವ ಸಹಾಯ ಸಂಘಕ್ಕೆ ನಿಷ್ಟೆ ಗೌರವವನ್ನು ತೋರಬೇಕು ಎಂದು ಗುರುಪುರ ಕೈಕಂಬದ ಸ್ಪಂದನ ಸ್ವ ಸಹಾಯ ಸಂಘಗಳ ಒಕ್ಕೂಟದ ಕೋಶಾಧಿಕಾರಿ ಯಲ್ಸಿ ಡಿ ಸೋಜ ಹೇಳಿದರು.ಅವರು ಮೂಡುಶೆಡ್ಡೆ ಯುವ ಜನ ಸೇವಾ ಸಂಘದಲ್ಲಿ ದಿಶಾ ಟ್ರಸ್ಟ್ ಪ್ರವತರ್ಿತ ಸ್ವ ಸಹಾಯ ಸಂಘಗಳಿಗೆ ನಡೆದ ದಾಖಲಾತಿ ನಿರ್ವಹಣೆ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

disha (1)

disha
ದಿಶಾ ಸಂಸ್ಥೆಯ ನಿದರ್ೇಶಕರಾದ ಸಿಲ್ವೆಸ್ಟರ್ ಡಿ ಸೋಜ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಸಂಘಗಳು ಪರಸ್ಪರ ಮಾನವೀಯ ಸಂಬಂಧ ಬದುಕು ಕಟ್ಟುವ ಸಂಕೇತಗಳು ಎಂದರು.
ದಾಖಲಾತಿ ನಿರ್ವಹಣೆ ತರಬೇತಿಯನ್ನು ಸಂಯೋಜಕರಾದ ಹೆನ್ರಿ ವಾಲ್ಡರ್ ನೀಡುತ್ತಾ ದಾಖಲೆಗಳು ಸಂಘದ ಆಸ್ತಿ ಅವುಗಳನ್ನು ನಿರ್ವಹಿಸುವುದು ಸದಸ್ಯರು ತಿಳಿದುಕೊಳ್ಳುವುದು ಅಗತ್ಯ ಎಂದರು.
ತರಬೇತಿ ಶಿಬಿರದಲ್ಲಿ ದಿಶಾ ಸಂಸ್ಥೆಯ ಕ್ಷೇತ್ರ ಸಂಯೋಜಕ ರುದೇಶ್ ಸ್ವ ಸಹಾಯ ಸಂಘಗಳ ಮುಖಂಡರುಗಳಾದ ಶ್ರೀಮತಿ ಗೀತಾ ಎದರುಪದವು , ಶ್ರೀಮತಿ ಚೇತನಾ ಪಿ.ಜಾರ, ಶ್ರೀಮತಿ ಅರುಣಾ ಜಾರ, ಶ್ರೀಮತಿ ರುಕ್ಮಿಣಿ ಶೆಟ್ಟಿ ಅಬರ್ಿ , ಶ್ರೀಮತಿ ಗಾಯತ್ರಿ ಶ್ರೀಮತಿ ಐರಿನ್ ಮಿನೇಜಸ್ ಉಪಸ್ಥಿತರಿದ್ದರು.
ದಿಶಾ ಸಂಸ್ಥೆ ಪ್ರವತರ್ಿತ ಶ್ರೀದೇವಿ ಮೂಡುಶಡ್ಡೆ ಭ್ರಮರಾಂಬಿಕೆ ಎದುರುಪದವು ಸೈಂಟ್ ಲಾರೆನ್ಸ್ ಕೆರಮ , ಕಟಿಲೇಶ್ವರೀ ಬೊಟ್ಟಿಕರೆರ , ಸತ್ಯನಾಥ ನಜಾರ ಸ್ವ ಸಹಾಯ ಸಂಘದ ಪಧಾಧಿಕಾರಿಗಳು ಹಾಗೂ ಸದಸ್ಯರು ತರಬೇತಿಯ ಪ್ರಯೋಜನ ಪಡೆದುಕೊಂಡರು.

 

By suddi9

Leave a Reply

Your email address will not be published. Required fields are marked *