ಬಜ್ಪೆ: ಉದ್ಯಮಿ ಸನತ್ ಶೆಟ್ಟಿಯವರ ಗುರುಪುರ ಸಮೀಪದ ಕಾಜಿಲ ನಿವಾಸಕ್ಕೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತೆರಳಿ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ. ತೆರಿಗೆಗೆ ಸಂಬಂಧಪಟ್ಟ ವಿಚಾರಕ್ಕೆ ಹಾಗೂ ಅವರ ವಿರುದ್ಧ ಕೆಲವೊಂದು ಮೂಲಗಳಿಂದ ಇಲಾಖೆಗೆ ದೂರು ಬಂದಿದ್ದ ಕಾರಣ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲು ಕಾರಣ ಎನ್ನಲಾಗಿದೆ. ಈ ವೇಳೆ ಮಾಧ್ಯಮದವರಿಗೂ ನಿರ್ಬಂಧ ಹೇರಲಾಗಿತ್ತು. ಆದರೆ ಯಾವುದೇ ದಾಖಲೆ ಪತ್ರ, ನಗದು ಅಥವಾ ಸ್ಥಿರಾಸ್ಥಿ ವಶಪಡಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ

By suddi9

Leave a Reply

Your email address will not be published. Required fields are marked *