ಗುರುಪುರ ಕೈಕಂಬದಲ್ಲಿ ಮೇ ದಿನಾಚರಣೆಯ ಅಂಗವಾಗಿ ಕರೆಯಲಾಗಿದ್ದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವ ಯು,ಬಿ. ಲೋಕಯ್ಯ.

ಸುದ್ದಿ9 ಕೈಕಂಬ ; ಇಂದಿಗೆ ಎಷ್ಟೇ ಸರಕಾರ ಬದಲಾದರೂ ಕಾರ್ಮಿಕರ ಬವಣೆ ತಪ್ಪಿಲ್ಲ. ಕಾರ್ಮಿಕರು ಇಂದಿಗೂ ಕೂಡಾ ಸೌಲಭ್ಯವಂಚಿತರಾಗಿ ದುಡಿಯುತ್ತಿದ್ದು ದೈನಸಿತನದಿಂದ ಬದುಕುತ್ತಿದ್ದಾರೆ. ಬಡ ಕಾಮರ್ಿಕರರನ್ನು ಯಾರೂ ಕೇಳುತ್ತಿಲ್ಲ… ಹೀಗೆಂದು ಆತಂಕ ವ್ಯಕ್ತಪಡಿಸಿದವರು ಕಮ್ಯುನಿಸ್ಟ್ ಪಕ್ಷದ ಮುಖಂಡ ಯು,ಬಿ ಲೋಕಯ್ಯ.
ಅವರು ಮೇ ದಿನಾಚರಣೆಯ ಅಂಗವಾಗಿ ಗುರುಪುರ ಕೈಕಂಬದಲ್ಲಿ ಗುರುವಾರ ಸಂಜೆ ಕರೆಯಲಾಗಿದ್ದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತಾಡುತ್ತಿದ್ದರು.
ಬಂಡವಾಳ ಶಾಹಿಗಳ ಕಪಿಮುಷ್ಠಿಯಲ್ಲಿ ಸಿಲುಕಿರುವ ಬಡ ಕಾರ್ಮಿಕರಿಗೆ ಇಂದು ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಎಡಪಕ್ಷಗಳು ಅಂದಿನಿಂದ ಇಂದಿನವರೆಗೆ ಹೋರಾಟ ಮಾಡುತ್ತಿದ್ದರು ಕಾರ್ಮಿಕರ ಬೇಡಿಕೆಗೆ ಕವಡೆಕಾಸಿನ ಕಿಮ್ಮತ್ತು ಸಿಗುತ್ತಿಲ್ಲ. ದ,ಕ ಜಿಲ್ಲೆಯಲ್ಲಿ ಲಕ್ಷಾಂತರ ಮಂದಿ ಕಾರ್ಮಿಕರಿದ್ದಾರೆ. ಉದಾಹರಣೆಗೆ ತೆಗೆದುಕೊಳ್ಳುವುದಾದರೆ ಬೀಡಿಕಾರ್ಮಿಕರಿಗೆ ಶೇ.25 ತುಟಿಭತ್ತೆ ಏರಿಕೆಯಾಗಿದ್ದರೂ ಅದಿನ್ನೂ ಸಿಗದಿರುವುದು ಅತ್ಯಂತ ದುಃಖಕರ ಸಂಗತಿ. ಎಡರಂಗ ಕೇಂದ್ರದಲ್ಲಿ ಗದ್ದುಗೆಯಲ್ಲಿದ್ದಾಗ ಕಾರ್ಮಿಕರಿಗೆ ಬೇಕಾದ ಹಲವು ಸೌಲಭ್ಯಗಳನ್ನು ಪ್ರಕಟಿಸಿದ್ದು ಅದು ಇಂದಿನವರೆಗೂ ಮುಂದುವರಿಯುತ್ತದೆ. ಅನಂತರ ಗದ್ದಗೆ ಹಿಡಿದ ಬಿಜೆಪಿ ಕಾಂಗ್ರೆಸ್ ಪಕ್ಷಗಳು ಕಾರ್ಮಿಕರಿಗೆ ಯಾವುದೇ ಸೌಲಭ್ಯವನ್ನು ಪ್ರಕಟಿಸದೆ ವಂಚಿಸಿದೆ. ಅದರ ಬದಲು ಇಂದು ಬೆಲೆಏರಿಕೆಯ ಬಿಸಿ ಬಡಜನತೆಗೆ ಸಿಕ್ಕಿದ್ದು ಕಾರ್ಮಿಕರಿಗೆ ಸಿಗುವ ಕನಿಷ್ಠ ಸಂಬಳದಲ್ಲಿ ದಿನದೂಡುವುದೇ ಕಷ್ಟವಾಗಿದೆ. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಇನ್ನು ನಾವು ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ. ಕಾರ್ಮಿಕರಿಗೆ ಬೇಕಾಗಿ ನಮ್ಮ ಹೋರಾಟ ತೀವ್ರ ಸ್ವರೂಪದಲ್ಲಿ ಮುಂದುವರಿಯಲಿದೆ. ಇದಕ್ಕೆ ಪ್ರತೀ ಕಾರ್ಮಿ ಕರು ನಮ್ಮ ಜೊತೆ ಕೈ ಜೋಡಿಸಬೇಕು ಎಂದು ಲೋಕಯ್ಯ ಕರೆ ನೀಡಿದ್ದಾರೆ.
ವರುಣನ ಆರ್ಭಟದಿಂದ ಸಭೆ ಅರ್ಧದಲ್ಲೇ ಮೊಟಕುಗೊಂಡಿತ್ತು. ವೇದಿಕೆಯಲ್ಲಿ ಕಾಮರ್ಿಕ ಮುಖಂಡರಾದ ಎಂ. ಹೊನ್ನಯ್ಯ ಕುಲಾಲ್, ಮಾಧವ ಮತ್ತಿತರರು ಉಪಸ್ಥಿತರಿದ್ದರು.
