ಚೆನ್ನೈ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಸಂಭವಿಸಿದ ಬಾಂಬ್ ಸ್ಫೋಟ ದುರಂತದಲ್ಲಿ   ಒಬ್ಬರು ಮೃತಪಟ್ಟಿದ್ದು 11 ಮಂದಿ ಗಾಯಗೊಂಡಿದ್ದಾರೆ. ಬೆಳಗ್ಗೆ 7.30 ರ ಸುಮಾರಿಗೆ ಗುವಾಹಟಿ-ಬೆಂಗಳೂರು ಎಕ್ಸ್’ಪ್ರೆಸ್ ರೈಲು ಚೆನ್ನೈನ ಸೆಂಟ್ರಲ್ ರೈಲ್ವೆ ನಿಲ್ದಾಣದ ಒಂಭತ್ತನೇ ಪ್ಲಾಟ್’ಫಾರ್ಮ್ನಲ್ಲಿದ್ದ ವೇಳೆ ಬಾಂಬ್ ಸ್ಪೋಟ ನಡೆದಿದೆ.

ಮೃತಪಟ್ಟವರನ್ನು ಆಂಧ್ರಪ್ರದೇಶ- ಗುಂಟೂರಿನ ಸ್ವಾತಿ(22) ಎಂದು ಗುರುತಿಸಲಾಗಿದ್ದು ಇವರು ಬೆಂಗಳೂರಿನ ವಿಜಯವಾಡದಿಂದ ಚೆನ್ನೆಗೆ ಪಾದಬೆಳೆಸಿದ್ದರು.

chennai-blast
chennai-blast

twin-bomb-blasts-at-chennai-railway-station-one-killed

ಫ್ಲಾಟ್ ಫಾರ್ಮ್ ನಂ.9 ಎಸ್5 ಸ್ಲೀಪರ್ ಕೋಚ್ ನ ಮೇಲ್ಬಾಘದಲ್ಲಿ ಈ ಬಾಂಬ್ ಸ್ಫೋಟಗೊಂಡಿದ್ದು ರೈಲು ಧಗಧಗನೆ ಉರಿಯುತ್ತಿದೆ.

ಭಯೋತ್ಪಾದಕರ ಕೃತ್ಯ ಎಂದು ನಂಬಲಾಗಿದ್ದು ಇದುವರೆಗೆ ಯಾವುದೇ ಭಯೋತ್ಪಾದಕ ಸಂಘಟನೆಗಳು ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿಲ್ಲ. ಮೇ ದಿನಾಚರಣೆಯ ಸಂಭ್ರಮದಲ್ಲಿರಬೇಕಾದ ರಾಷ್ಟ್ರದ ಜನತೆ ಇದರಿಂದಾಗಿ ಶೋಕಸಾಗರದಲ್ಲಿ ಮುಳುಗುವಂತಾಗಿದೆ. ಚೆನ್ನೈ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಶಂಕಿತನೊಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ತುರ್ತಾಗಿ ಆಗಮಿಸಿದ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದು, ಘಟನೆ ಕುರಿತು ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದು 9 ಮಂದಿ ಸಾಧಾರಣ ಗಾಯಗೊಂಡಿದ್ದಾರೆಂದು ಗೊತ್ತಾಗಿದ್ದು ಎಲ್ಲರನ್ನೂ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತಪಟ್ಟ ಮಹಿಳೆಗೆ ರೈಲ್ವೆ ಮಂತ್ರಿ 1 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 5000 ರೂ. ಪರಿಹಾರ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ.

ಹೆಚ್ಚಿನ ತನಿಖೆಯ ನಂತರವಷ್ಟೇ ಈ ಬಾಂಬ್ ಸ್ಪೋಟದಲ್ಲಿ ಯಾರ ಕೈವಾಡವಿದೆಯೆಂದು ಸ್ಪಷ್ಟವಾಗಿ ಗೊತ್ತಾಗಲಿದೆ. ಇದುವರೆಗೂ ಯಾವೊಂದು ಭಯೋತ್ಪಾದನಾ ಸಂಘಟನೆಗಳೂ ಕೂಡ ಈ ಸ್ಪೋಟದ ಹೊಣೆ ಹೊತ್ತುಕೊಂಡಿಲ್ಲ.

ಚೆನ್ನೈನ ರೈಲ್ವೆ ನಿಲ್ದಾಣದಲ್ಲಿ ದುರ್ಬಲ ರಕ್ಷಣಾ ವ್ಯವಸ್ಥೆಯಿಂದ ಈ ದುರಂತ ಸಂಭವಿಸಿದೆ. ಲೋಕಸಭಾ ಚುನಾವಣೆಯ ವೇಳೆ ತಮಿಳು ಉಗ್ರರು ಅಥವಾ ಪಾಕ್ ಉಗ್ರರು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಚುನಾವಣೆಯ ಸಂದರ್ಭ ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗುವುದಾಗಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಈ ಮೊದಲೇ ಎಚ್ಚರಿಕೆ ನೀಡಿದ್ದರೂ ಅದನ್ನು ಗಾಳಿಗೆ ತೂರಿದ ತಮಿಳುನಾಡಿನ ಅಮ್ಮನ ಸರಕಾರ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಬೆಂಗಳೂರಿನ ವಿಧಾನಸೌಧ ಮತ್ತು ದೇಶದ ಇತರ ನಗರಗಲ್ಲಿ ಬಾಂಬ್ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಐಎಸ್ಐ ಉಗ್ರ ಜಾಹೀರ್ ಹುಸೇನ್ ನನ್ನು ಚೆನ್ನೈ ಪೊಲೀಸರು ಬುಧವಾರ ಬಂಧಿಸಿದ್ದರು. ಈ ಬಂಧನವಾದ ಒಂದು ದಿನದಲ್ಲಿಯೇ ಬಾಂಬ್ ಸ್ಫೋಟ ಸಂಭವಿಸಿರುವುದು ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ.

ರೈಲ್ವೆ ಇಲಾಖೆ ಹೆಲ್ಪ್ ಲೈನ್ ಆರಂಭಿಸಿದ್ದು 044-25357398 ಕರೆ ಮಾಡಿ ಸಹಾಯಪಡೆದುಕೊಳ್ಳಬಹುದೆಂದು ಹೇಳಿದೆ.

By suddi9

One thought on “ಚೆನ್ನೈ ರೈಲ್ವೆ ನಿಲ್ದಾಣದ ಬಳಿ ಬಾಂಬ್ ಢಮಾರ್; ಓರ್ವ ಸಾವು: 11 ಗಂಭೀರ; ಶಂಕಿತ ವಶಕ್ಕೆ”
  1. Yaake rss kaivaada erabaradu.. deshadalli nade adesto bomb blast prakaranadalli hamayakarannu bhandisuhudarinda .spotana hecchagutta hogutide.. shaeed hemath karkerarannu konda nantara nadeda yella spotagalalli naijya aropigalannu bittu hamayakarannu bhandisi kai toleyutta eddare.. adaralli IB gala patravu hecchagide…

Leave a Reply

Your email address will not be published. Required fields are marked *