“ಬಲೆ ತೆಲಿಪಾಲೆ-2’ರಿಯಾಲಿಟಿ ಶೋ ಆರಂಭ
ಸುದ್ದಿ9 ಎಡಪದವು; ಬಡಗ ಎಡಪದವು ಶಾಸ್ತವು ಶ್ರೀ ಭೂತನಾಥೇಶ್ವರ ದೇವಸ್ಥಾನ ಹಾಗೂ ನಮ್ಮ ಟಿ.ವಿ ವಾಹಿನಿಯ ಸಹಭಾಗಿತ್ವದಲ್ಲಿ ನಡೆದ “ಬಲೆ ತೆಲಿಪಾಲೆ -2” ಕಾರ್ಯಕ್ರಮವನ್ನು ಶಾಸ್ತವು ದೇವಸ್ಥಾನದಲ್ಲಿ ಭಾನುವಾರ ತುಳು ರಂಗಕಮರ್ಿ ದೇವದಾಸ್ ಕಾಪಿಕಾಡ್ ಉದ್ಘಾಟಿಸಿದರು. ತುಳು ಚಿತ್ರ ನಟ ಅಜರ್ುನ್ ಕಾಪಿಕಾಡ್ ,ಶಾಸತವು ಕ್ಷೇತ್ರದ ಆಡಲಿತ ಮೊಕ್ತೇಸರ ವಿಜಯನಾಥ ವಿಠಲಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿಶ್ವದ ಕೋಟ್ಯಾಂತರ ಜನರು “ಬಲೆ ತೆಲಿಪಾಲೆ “ಕಾರ್ಯಕ್ರಮವನ್ನು ಆಸ್ವಾದಿಸಿದ್ದಾರೆ ಹಲವಾರು ಕಲಾವಿದರು ಬಡ್ತಿ ಪಡದಿರುವುದು ಹೆಮ್ಮೆಯ ಸಂಗತಿ ಎಂದರು. ನಮ್ಮ ಟಿ.ವಿ ಸುದ್ದಿವಾಹಿನಿಯ ಮುಖ್ಯಸ್ಥ ಡಾ.ಶಿವಶರಣ್ ಶೆಟ್ಟಿ ಶಾಸ್ತವು ದೇವಸ್ಥಾನದ ಆಡಲಿತ ಮಂಡಳಿಯ ಸದಸ್ಯರಾದ ಅಜರ್ುನ್ರೈ,ಕಾಂತಪ್ಪ ಶೆಟ್ಟಿ ದೇವಸ್ಥಾನದ ಸಿಬ್ಬಂದಿಗಳಾದ ಸುಭಾಸ್ ರಾವ್, ಶ್ರೀನಿವಾಸ ಶೆಟ್ಟ, ದೀಪ್ತಿ ಉಪಸ್ಥಿತರಿದ್ದರು. ನಿರೂಪಕ ನವೀನ್ ಶೆಟ್ಟಿ ಎಡ್ಮೆಮಾರ್ ಸಂಯೋಜನೆ ಮಾಡಿದರು.
