ಬಜ್ಪೆ: ಕೆಂಜಾರು ಗ್ರಾಮದ ಪಟ್ಲವೊಂದರಲ್ಲಿ ದೊಡ್ಡದಾದ, ಉದ್ದ ಮೀಸೆಯ (ಎಟ್ಟಿ) ಸಿಗಡಿ ಪತ್ತೆಯಾಗಿದ್ದು ಅಚ್ಚರಿಗೆ ಕಾರಣವಾಗಿದೆ.

ಇದರ ತೂಕ 300 ಗ್ರಾಂ. ಇತ್ತು. ಇಲ್ಲಿನ ಯುವಕರ ತಂಡವೊಂದು ಮರವೂರು ಪಲ್ಗುಣಿ ಸಮೀಪದ ಪಟ್ಲದಲ್ಲಿ ಬಲೆ ಹಾಕಿ ಮೀನು ಹಿಡಿಯುವಾಗ ಇತರ ಮೀನುಗಳು ಹಾಗೂ ಎಟ್ಟಿಗಳ ಮಧ್ಯೆ ಸಿಕ್ಕಿದ ಈ ಎಟ್ಟಿಯ ದೇಹಾಕೃತಿ ಹಾಗೂ ಮೈಕಟ್ಟು ಅತ್ಯಂತ ಆಕರ್ಷಣೀಯವಾಗಿತ್ತು. ಪೋರ್ಕೋಡಿ ಧನಂಜಯ ಅವರ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.



