ಬಜಪೆ: ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಆವರಣದಲ್ಲಿ *ಬಲೆ ತೆಲಿಪಾಲೆ* ಎಂಬ ನಗೆಗಡಲಲ್ಲಿ ತೇಲುತ್ತಿದ್ಧ ಸಹಸ್ರ-ಸಹಸ್ರ ಸಂಖ್ಯೆ ಜನಸಾಗರ ಇದ್ದಕ್ಕಿದ್ದಂತೆ ರಾಷ್ಟ್ರೀಯತೆಯನ್ನು ಗಂಭೀರವಾಗಿ ಗೌರವಿಸಿದ ಕ್ಷಣವದು.
8vm. Mallesh
ಕಾರ್ಗಿಲ್ ಯೋಧ ಹವಾಲ್ದಾರ್ ಮಲ್ಲೇಶ್ ಅವರಿಗೆ *ಬಲೆ ತೆಲಿಪಾಲೆ* ಹಾಸ್ಯೋತ್ಸವ ಕಾರ್ಯಕ್ರಮಕ್ಕೆ ಸ್ವಾಗತ ಎಂದು ನಿರೂಪಕರು ಹೇಳಿದಾಗ ಸ್ವಯಂ ಪ್ರೇರಣೆಯಿಂದ ಜನಸಾಗರ ಎದ್ದು ನಿಂತು ಗೌರವ ಸೂಚಿಸಿತು.
ಬಲೆ ತೆಲಿಪಾಲೆ *ಸೀಸನ್ 3ರ* ಫೈನಲ್ಸ್ ಸಂದರ್ಭ ಭಾನುವಾರ ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಳದ ಆಡಳಿತ ಮೊಕ್ತೇಸರ ವಿಜಯನಾಥ ಶೆಟ್ಟಿ ಮಲ್ಲೇಶ್ ಅವರನ್ನು ಗೌರವಿಸಿದರು. ನಿವೃತ್ತ ಸೇನಾ ಅದಿಕಾರಿ ಉಪಸ್ಥಿತರಿದ್ಧರು.
ಕಳೆದ 20 ವರ್ಷಗಳಿಂದ ಸೇನೆಯಲ್ಲಿ ಸೇವೆಗೈಯುತ್ತಿರುವ ಮಲ್ಲೇಶ್ ಅವರು ಕಾರ್ಗಿಲ್, ಜಮ್ಮು ಕಾಶ್ಮೀರ, ರಾಜಸ್ಥಾನ ಮುಂತಾದೆಡೆ ಹೋರಾಟದಲ್ಲಿ ತೊಡಗಿಸಿಕೊಂಡಿದ್ಧರು.
ಪ್ರಸ್ತುತ ಮಂಗಳವಾರ ವೆಲೆನ್ಸಿಯಾದಲ್ಲಿ ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್ನ ಸಲುವಾಗಿ ನಿಯೋಜನೆಗೊಂಡಿದ್ಧಾರೆ.
*ದೇಶ ಸೇವೆಯ ವಿಚಾರ ಬಂದಾಗ ನಾವು ನಮ್ಮವರು ಎಂಬ ಎಲ್ಲ ಸಂಬಂಧಗಳೂ ಮರೆತು ಹೋಗುತ್ತರೆ. ಸೇನೆಯ ಸೇವೆಯಲ್ಲಿ ಸಾರ್ಥಕ್ಯದ ಭಾವವಿದೆ.* ಎಂದು ಗೌರವಾರ್ಪಣೆಗೆ ಮಲ್ಲೇಶ್ ಪ್ರತಿಕ್ರಿಯಿಸಿದರು.

By suddi9

Leave a Reply

Your email address will not be published. Required fields are marked *