ಇಸ್ಲಾಮಾಬಾದ್: ಹೌದು, ಆಶ್ಚರ್ಯವಾದರೂ ನಂಬಲೇಬೇಕು. ಪಾಕಿಸ್ತಾನದ ಭಕ್ಕರ್ ಜಿಲ್ಲೆಯ ದರ್ಯಾ ಖಾನ್ ಎಂಬ ಪಟ್ಟಣದಲ್ಲಿ ಇಬ್ಬರು ನರಭಕ್ಷಕ ಸಹೋದರರಿದ್ದಾರೆ. ಸ್ಮಶಾನದಲ್ಲಿ ಹೂತಿಟ್ಟಿದ್ದ ಶವಗಳನ್ನ ತಂದು ಮಾಂಸವನ್ನ ತಿನ್ನುತ್ತಾರೆ.ಹೀಗೆ ನರಮಾಂಸ ಭಕ್ಷಣೆ ವೇಳೆ ಸಿಕ್ಕಿಬಿದ್ದಿದ್ದ ಸಹೋದರರಿಗೆ 2011ರಲ್ಲಿ 2 ವರ್ಷ ಜೈಲು ಶಿಕ್ಷೆಯಾಗಿತ್ತು. ಆದರೆ, ಜೈಲಿನಿಂದ ಹೊರಬಂದ ಬಳಿಕವೂ ಇವರು ತಮ್ಮ ಚಟ ಬಿಟ್ಟಿಲ್ಲ. ಇತ್ತೀಚೆಗೆ ಪೊಲೀಸರು ನಡೆಸಿದ ದಾಳಿ ವೇಳೆ ಇವರ ಮನೆಯಲ್ಲಿ ಮಗುವಿನ ತಲೆಬುರುಡೆ ಪತ್ತೆಯಾಗಿದ್ದು, ಸ್ಥಳೀಯ ನಿವಾಸಿಗಳು ಬೆಚ್ಚಿಬೀಳುವಂತೆ ಮಾಡಿದೆ.
ಭಕ್ಕರ್ ಜಿಲ್ಲೆಯ ದರ್ಯಾ ಖಾನ್ ಪಟ್ಟಣದ ಸಹೋದರರಾದ ಆರಿಫ್ ಮತ್ತು ಫರ್ಹಾನ್ ನರಮಾಂಸ ಭಕ್ಷಕರು. ಇವರಿಗೆ ಈ ಚಟ ಅದ್ಯಾಗೆ ಅಂಟಿಕೊಂಡಿತೋ ಗೊತ್ತಿಲ್ಲ. ಊರಿನ ಸ್ಮಾಶಾನದಲ್ಲಿ ಹೂತಿಟ್ಟಿದ್ದ ಶವಗಳನ್ನ ತಂದು ಅವುಗಳ ಮಾಂಸ ಭಕ್ಷಣೆ ಮಾಡುತ್ತಿದ್ದರು. ಸ್ಥಳಿಯ ಜನರ ಕೈಗೆ ಸಿಕ್ಕಿಬೀಳುವ ಮುನ್ನ ಇವರು ಸುಮಾರು 150 ಶವಗಳನ್ನ ತಿಂದು ಮುಗಿಸಿದ್ದರು. ಇದಾದ ಬಳಿಕ 2011ರಲ್ಲಿ ಇವರನ್ನ ಬಂಧಿಸಿ ಕರೆದೊಯ್ಯಲಾಯಿತು. ಬಳಿಕ ನ್ಯಾಯಾಲಯದಲ್ಲಿ 2 ವರ್ಷ ಶಿಕ್ಷೆಯೂ ಆಗಿದೆ. ಜೈಲಿನಲ್ಲಿಯೇ ಇವರ ಮಾನಸಿಕ ಅಸ್ವಸ್ಥೆತೆಗೆ ಚಿಕಿತ್ಸೆ ನೀಡಲಾಗಿದೆ. ಆದರೆ, ಇದೀಗ ಜೈಲಿನಲ್ಲಿ ರಿಲೀಸ್ ಆಗಿರುವ ಈ ಸಹೋದರರು ಮತ್ತೆ ನರಮಾಂಸ ಭಕ್ಷಣೆ ಶುರುಮಾಡಿದ್ದಾರೆ. ಮನೆಯಲ್ಲಿ ಯುವಕನ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಆರೀಫ್`ನನ್ನ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರಿಫ್ ಯುವತಿಯ ಶವವನ್ನ ಭಕ್ಷಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಮತ್ತೊಬ್ಬ ಆರೋಪಿ ಫರ್ಹಾನ್ ತಲೆಮರೆಸಿಕೊಂಡಿದ್ದು, ಪೊಳಿಸರು ಬಲೆ ಬೀಸಿದ್ಧಾರೆ.

