ನ್ಯೂಯಾರ್ಕ್: ನಂಬಿದರೆ ನಂಬಿ ಬಿಟ್ಟರೆ ಬಿಡಿ. ಇಂಥದ್ದೊಂದು ಘಟನೆ ಅಮೆರಿಕದ ನ್ಯೂಯಾರ್ಕ್`ನಲ್ಲಿ ನಡೆದಿದೆ. 1.25 ಮಿಲಿಯನ್ ಡಾಲರ್(8ಕೋಟಿ ರೂಪಾಯಿ) ಜಯಿಸಿದ್ದ ಲಾಟರಿ ಟಿಕೇಟನ್ನು ವ್ಯಕ್ತಿಯೊಬ್ಬ ಕಸದ ಬುಟ್ಟಿಗೆ ಎಸೆದಿದ್ದಾನೆ.ನ್ಯೂಯಾರ್ಕ್`ನ ಸೌತ್ ಕ್ವೀನ್ ಸ್ಟ್ರೀಟ್`ನಲ್ಲಿ ವರ್ಷದ ಹಿಂದೆ ತಲಾ 50 ಸಾವಿರ ಬಹುಮಾನದ ಒಂದೇ ನಂಬರಿನ 25 ಟಿಕೆಟ್ ಖರೀದಿಸಿದ್ದ ವ್ಯಕ್ತಿಯೊಬ್ಬ ಲಾಟರಿ ಗೆದ್ದ ಬಳಿಕವೂ ಅದರಿಂದ ಹಣ ಪಡೆಯದೇ ಟಿಕೆಟ್`ಗಳನ್ನು ಕಸದ ಬುಟ್ಟಿಗೆ ಎಸೆದಿದ್ಧಾನೆ.
ವೆಂಡಿ ಹಿಂಟನ್ ಎಂಬಾತ ಪ್ರತಿದಿನ ಬಂದು ತನ್ನ ಬಳಿ ಒಂದೇ ನಂಬರಿನ 20ರಿಂದ 25 ಟಿಕೆಟ್ ಖರೀದಿಸುತ್ತಿದ್ದ. ದಿನವೊಂದಕ್ಕೆ ಲಾಟರಿಗಾಗಿಯೇ ಕನಿಷ್ಠ 100 ಡಾಲರ್ ಖರ್ಚು ಮಾಡುತ್ತಿದ್ದ. ಕಳೆದ ವರ್ಷದ ಮಾರ್ಚ್ 6ರಂದು ಆತ ನನ್ನ ಬಳಿ 25 ಟಿಕೆಟ್ ಖರೀದಿಸಿದ್ದ. ಲಾಟರಿ ಗೆದ್ದಿರುವ ಬಗ್ಗೆ ನಾನು ಆತನಿಗೆ ಮಾಹಿತಿ ನೀಡಿದ್ದೆ. ಆದರೆ, ಟಿಕೇಟನ್ನು ಸರಿಯಾಗಿ ಓದಿಕೊಳ್ಳದ ವೆಂಡಿ ಜಿಗುಪ್ಸೆಯಿಂದ ಟಿಕೆಟ್`ಗಳನ್ನು ಕಸದ ಬುಟ್ಟಿಗೆ ಹಾಕಿದ್ಧಾನೆ. ಇದೀಗ ಆ ಲಾಟರಿ ಟಿಕೆಟ್`ಗಳ ಸಮಯ ಮುಗಿದುಹೋಗಿದೆ ಎಂದು ಲಾಟರಿ ಅಂಗಡಿಯ ಮಾಲೀಕರು ತಿಳಿಸಿದ್ದಾರೆ.
ಒಟ್ಟಿನಲ್ಲಿ 8 ಕೋಟಿ ಗೆದ್ದ ಅದೃಷ್ಟವಂತ ವೆಂಡಿ ಹಿಂಟನ್`ಗೆ ಅದನ್ನ ಅನುಭವಿಸುವುದು ಸಾಧ್ಯವಾಗಲಿಲ್ಲ. ಅತನ ದಡ್ಡತನದಿಂದಲೇ ಕೈಬಂದ ತುತ್ತನ್ನ ಕೈಚೆಲ್ಲಿ ನತದೃಷ್ಟನಾಗಿದ್ದಾನೆ.

