ಫರಂಗಿಫೇಟೆ: ಪುದು ಗ್ರಾಮ ದ ಕುಂಜತ್ಕಳ ಎಂಬಲ್ಲಿ ತಡೆ ಗೋಡೆ ಬಿದ್ದು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಫರಂಗಿ ಫೇಟೆಯ ಸಮೀಪ ಕುಂಜತ್ಕಳ ಎಂಬಲ್ಲಿ ಸಂಭವಿಸಿದೆ. ಕಳೆದೆರಡು ದಿನಗಳಿಂದ ಬಿಡದೆ ಸುರಿದ ಭಾರಿ ಮಳೆಗೆ ಕುಂಜತ್ಕಳ ಮೊಹಮ್ಮದ್ ಹನೀಫ್ ಎಂಬವರ ಮನೆ ಮೇಲೆ ತಡೆ ಗೋಡೆ ಕುಸಿದು ಬಿದ್ದು ಅವರ 7ವರ್ಷ ಪ್ರಾಯದ ಮಗ ಅಶ್ರಫ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಸ್ಥಳಕ್ಕೆ ದ ಕ ಜಿಲ್ಲಾ ಪಂಚಾಯತ್ ಉಪಾದ್ಯಕ್ಷ ಸತೀಶ್ ಕುಂಪಲ ಬೇಟಿ ನೀಡಿ ಸ್ಥಳ ಪರಿಶೀಲಿಸಿದ ಸತೀಶ್ ಕುಂಪಲ ಅವರು ಸಂಬಂದ ಪಟ್ಟ ಅಧಿಕಾರಿಗಳಿಗೆ ಕೂಡಲೇ ವಿಲೇವಾರಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಈ ಅಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಜಯಶ್ರಿ ಕೆ ಎ , ಹನೀಫ್ , ಮನೋಜ್ ಆಚಾರ್ಯ , ಪ್ರವೀಣ್ ಶೆಟ್ಟಿ ಸುಜೀರ್ , ವಸಂತ ಶೆಟ್ಟಿ , ದಿನೇಶ್ ಆರ್ ಶೆಟ್ಟಿ ಕೊಟ್ಟಿಂಜ , ಎಂ ಕೆ . ಅಶ್ರಫ್ , ಸುಲೈಮಾನ್ , ಮತ್ತಿತರರು ಉಪಸ್ತಿತರಿದ್ದರು.



