ಸುದ್ದಿ9 ಕೈಕಂಬ; ಶ್ರೀ ಕ್ಷೇತ್ರ ನೆಲ್ಲಿ ತೀರ್ಥ ಸೋಮನಾಥೇಶ್ವರ ದೇವಸ್ಥ್ತಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಮಂಗಳವಾರ ಬೆಳಿಗ್ಗೆ ತೋರಣ ಮುಹೂರ್ತದೊಂದಿಗೆ ಆರಂಭಗೊಂಡಿತು.

ಕಟೀಲ್ ಶ್ರೀ ದುರ್ಗಾ ಪರಮೇಶ್ವರೀ ದೇವಳದ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಅವರು ಉಗ್ರಾಣ ಮುಹೂರ್ತ ನೆರವೇರಿಸಿದರು. ಕಟೀಲ್ ದೇವಳದ ಅರ್ಚಕ ಕೆ.ಲಕ್ಸ್ಮೀನಾರಾಯಣ ಆಸ್ರಣ್ಣ ಜೀರ್ಣೊ ದ್ದಾರ ಸಮಿತಿಯ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುಣರೂರು ,ಮಾಜಿ ಸಚಿವರುಗಳಾದ ಕೆ.ಅಮರನಾಥ ಶೆಟ್ಟಿ ,ಬಿ.ನಾಗರಾಜ ಶೆಟ್ಟಿ, ಭುವನಾಭಿರಾಮ ಉಡುಪ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಿ.ಸುಬ್ರಾಯ ಭಟ್, ಎನ್.ವಿ.ಜಿ.ಕೆ ಭಟ್, ಉದ್ಯಮಿ ಶ್ರೀಪತಿಭಟ್, ಆನಂದ ಕಾವ ಅರ್ಚಕ ಪ್ರಸನ್ನ ಭಟ್, ಮತ್ತಿತರರು ಉಪಸ್ಥಿತರಿದ್ದರು. ಏ.4 ಶುಕ್ರವಾರ ಪ್ರತಿಷ್ಠೆ,ಎ.6 ಬ್ರಹ್ಮಕಲಶಾಭಿಷೇಕ ಜರಗಲಿದೆ. ಪ್ರತಿ ನಿತ್ಯ ಧಾರ್ಮಿಕ, ವೈದಿಕ,ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಅನ್ನಸಂತರ್ಪನೆ ಜರಗಲಿದೆ.










