ಸುದ್ದಿ 9 ಕೈಕಂಬ; ಸ್ಪಂದನ ಸ್ವ ಸಹಾಯ ಸಂಘಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆಯು ಮಾ.28 ಶುಕ್ರವಾರ ಗುರುಪುರ ಕೈಕಂಬ ವಿಶ್ವರೂಪಸೌಧದ ಸಭಾಂಗಣದಲ್ಲಿ ನಡೆಯಿತು. ದಿಶಾ ಸಂಸ್ಥೆಯ ನಿದೇರ್ಶಕರಾದ ಸಿಲ್ವೆಸ್ಟರ್ ಡಿ ಸೋಜರವರ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿ ರಚಿಸಿ ನೂತನ ಪಧಾಧಿಕಾರಿಗಳನ್ನು ಆಯ್ಕೆ ನಡೆಸಲಾಯಿತು.

ನೂತನ ಅಧ್ಯಕ್ಷರಾಗಿ ಅನುಸೂಯ ಕಾಜವ ಶ್ರೀತುಳಸಿ ಸ್ವ ಸಹಾಯ ಸಂಘ ಕಿಲಿಂಜಾರು ಕುಪ್ಪೆಪದವು, ಕಾರ್ಯದಶರ್ಿಯಾಗಿ ಸವಿತ ಸಂಗಮ ಸ್ವ ಸಹಾಯ ಸಂಘ ಪಂಜ ಕೊಳವೂರು, ಕೋಶಾಧಿಕಾರಿಯಾಗಿ ಶಾಲೆಟ್ ರೊಡ್ರಿಗಸ್ ಸೌಜನ್ಯ ಸ್ವ ಸಹಾಯ ಸಂಘ ಈಶ್ವರಕಟ್ಟೆ ಕೊಳಂಬೆ, ಉಪಾಧ್ಯಕ್ಷರಾಗಿ ಸೆಲಿಕ ಆಶಿಕ ಸ್ವಸಹಾಯ ಸಂಘ ಕೋಂದೋಡಿ ಎಡಪದವು, ಜತೆ ಕಾರ್ಯದಶರ್ಿ ಎಲ್ಸಿ ಡಿ ಸೋಜ ಸೈಂಟ್ ಲಾರೆನ್ಸ್ ಸ್ವ ಸಹಾಯ ಸಂಘ ಕೆರಮ ಮೂಡುಶೆಡ್ಡೆ, ಕಾರ್ಯಕಾರಿ ಸದಸ್ಯರಾಗಿ ಜಮೀಳ ಪ್ರಕೃತಿ ಸ್ವ ಸಹಾಯ ಸಂಘ ಅಂಗಡಿಮನೆ ಕಂದಾವರ, ಅಪ್ಸ ಬಾನು ಜೀವನ್ಜ್ಯೋತಿ ಸ್ವ ಸಹಾಯ ಸಂಘ ಮುರ ಮುತ್ತೂರು, ಕುಶಲ ಸ್ನೇಹ ಸ್ವ ಸಹಾಯ ಸಂಘ ಕತ್ತಲ್ಸಾರ್ ಪಡುಪೆರಾರ, ಆಮೀನ ನಿಸರ್ಗ ಸ್ವ ಸಹಾಯ ಸಂಘ ಬಂಗ್ಲಗುಡ್ಡೆ ಮೂಳೂರು, ಕಸ್ತೂರಿ ಸ್ವರ್ಣ ಸ್ವ ಸಹಾಯ ಸಂಘ ಮೂಡುಜಪ್ಪು ಉಳಾಯಿಬೆಟ್ಟು, ಭವಾನಿ ಮಂಗಳಾಂಬಿಕೆ ಸ್ವ ಸಹಾಯ ಸಂಘ ಕಂಜಿಲಗುಡ್ಡೆ ಮಲ್ಲೂರು, ಸುಶೀಲ ಬೆಳಕು ಸ್ವ ಸಹಾಯ ಸಂಘ ಅಳಕೆ ಅಡ್ಡೂರು ಆಯ್ಕೆಗೊಂಡರು.

