ಬಜಪೆ: ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಎ.25 ಶನಿವಾರ ಪ್ರಾರಂಭಗೊಳ್ಳಲಿದೆ.

ಬೆಳಿಗ್ಗೆ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಗಣಪತಿ ಹೋಮ, ಅಂಬಿಕಾ ಅನ್ನಪೂರ್ಣೇಶ್ವರೀ ದೇವಿಗೆ 49 ಕಲಶಾಭಿಷೇಕ, ಮಧ್ಯಾಹ್ನ 12.30 ಕ್ಕೆ ಧ್ವಜಾರೋಹಣ ನಡೆಯಲಿದೆ. ರಾತ್ರಿ ಉತ್ಸವ ಬಲಿ, ಕಲ್ಕುಡ ನೇಮ ಜರುಗಲಿದೆ.
ಎ.26 ಭಾನುವಾರ ರಾತ್ರಿ ಪಡುಪೆರಾರ ಸವಾರಿ (ಬೆಳ್ಳಿ ರಥ), ಬಳಿಕ ಧರ್ಮಸ್ಥಳ ಮೇಳದವರಿಂದ ಯಕ್ಷಗಾನ ಬಯಲಾಟ, ಎ.27 ಸೋಮವಾರ ಬೆಳಿಗ್ಗೆ ಚಂಡಿಕಾ ಯಾಗ, ರಾತ್ರಿ ಬೆಳ್ಳಿ ರಥದಲ್ಲಿ ಬಜಪೆ ಸವಾರಿ, ಬಳಿಕ ಕಟೀಲು ಮೇಳದವರಿಂದ ಯಕ್ಷಗಾನ, ಎ.28 ಮಂಗಳವಾರ ಬೆಳಿಗ್ಗೆ ಚಂಡಿಕಾಯಾಗ ಮಧ್ಯಾಹ್ನ 12.30ಕ್ಕೆ ಹಗಲು ರಥೋತ್ಸವ, ರಾತ್ರಿ 7ಕ್ಕೆ ರಥೋತ್ಸವ, ಎ.29 ಬುಧವಾರ ಬೆಳಿಗ್ಗೆ ಚಂಡಿಕಾ ಯಾಗ, ಸಂಜೆ ಭಕ್ತಿಗಾನ ವೈಭವ, ರಾತ್ರಿ ದೇವೀ ದರ್ಶನ, ನೇಮೋತ್ಸವ, ಅವಭ್ರತೋತ್ಸವ, ಧ್ವಜಾವರೋಹಣದೊಂದಿಗೆ ಜಾತ್ರಾಮಹೋತ್ಸವ ಸಂಪನ್ನಗೊಳ್ಳಲಿದೆ.
ಧಾರ್ಮಿಕ ಕಾರ್ಯಕ್ರಮಗಳು ವೇದಮೂರ್ತಿ ಕುಡುಪು ನರಸಿಂಹ ತಂತ್ರಿಗಳ ನೇತ್ರತ್ವದಲ್ಲಿ ಧರ್ಮದರ್ಶಿ ಶ್ರೀ ನಿರಂಜನ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ.
