ಬಜಪೆ:  ಪರಸ್ಪರ ಸಹಕಾರಿ ಮನೋಭಾವದಿಂದ ಸಮಾಜಿಕ ಸಮತೋಲನ ಹಾಗೂ ಪ್ರಗತಿಯನ್ನು ಕಾಣಲು ಸಾಧ್ಯ. ಈ ದೃಷ್ಟಿಯಲ್ಲಿ ಸಹಕಾರಿ ಸಂಘಗಳು ಪರಿಣಾಮಕಾರಿ ಪಾತ್ರ ವಹಿಸಿವೆ. ಮಂಗಳೂರು ವಿಮಾನ ನಿಲ್ದಾಣದ ಪ್ರಗತಿಯಲ್ಲಿ ಇಲ್ಲಿನ ಟೂರಿಸ್ಟ್-ಟ್ಯಾಕ್ಸಿ ಚಾಲಕ-ಮಾಲಕರ ಪಾತ್ರವೂ ಇದೆ. ತಾವು ನೀಡುವ ಸೇವೆಯಲ್ಲಿ ಕೇವಲ ಸಂಪಾದನೆ ಮಾತ್ರವಲ್ಲದೆ ಪ್ರಯಾಣಿಕರ ವಿಶ್ವಾಸರ್ಹತೆಯನ್ನು ಗಳಿಸುವುದು ಕೂಡಾ ವಾಹನ ಚಾಲಕರಿಗೆ ಅಷ್ಟೇ ಮುಖ್ಯ. ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ದೇಶಕ ಜೆ.ಟಿ ರಾಧಾಕೃಷ್ಣ ಹೇಳಿದರು.
ಅವರು ಬಜಪೆ ಏರ್ ಪೊರ್ಟ್ ಟೂರಿಸ್ಟ್ ಮತ್ತು ಟ್ಯಾಕ್ಸಿ ಚಾಲಕ-ಮಲಕರ ಸಹಕಾರ ಸಂಘದ ನೂತನ ಕಚೇರಿಯನ್ನು ಕಿನ್ನಿಪದವು ಲೈಕೊರಿಸ್ ಟೌನ್ ಕಟ್ಟಡದ ಉದ್ಘಾಟಿಸಿ ಶುಭ ಹಾರೈಸಿದರು.

24vm airport (1)
ಬಜಪೆ ವಿಜಯ ವಿಠಲಭಜನಾ ಮಂದಿರದ ಅರ್ಚಕ ವೇದವ್ಯಾಸ ಭಟ್, ಬಜಪೆ ಸೈಂಟ್ ಜೋಸೆಫ್ ಚರ್ಚ್‍ನ ಧರ್ಮಗುರು ರೆ|ಫಾ|ಲಿಯೋ ಲೋಬೋ, ಕಿನ್ನಿಪದವು ಮಸೀದಿಯ ಹಾಜಿ ಇಬ್ರಾಹಿಂ ಮುಸ್ಲಿಯಾರ್ ಅವರುಗಳು ಶುಭಾಶಂಸನೆಗೈದರು.
ಸಂಘದ ಅಧ್ಯಕ್ಷ ಎಸ್.ಬಿ.ಜಯಂತ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಹಕಾರ ಸಂಘಗಳ ನಿವೃತ್ತ ಉಪನಿಬಂಧಕ ಚಂದ್ರಶೇಖರ ಸುವರ್ಣ ಸಂಸ್ಥೆಯ ಪ್ರಗತಿ ಬಗ್ಗೆ ಶ್ಲಾಘಿಸಿದರು.
ಸಂಘದ ಉಪಾಧ್ಯಕ್ಷ ಅಬ್ದುಲ್ ಖಾದರ್, ಮುಖ್ಯ ಕಾರ್ಯನಿರ್ಣಾಹಣಾಕಾರಿ ರಾಬರ್ಟ್ ಸಲ್ಡಾನ, ನಿರ್ದೇಶಕರುಗಳಾದ ಭೋಜ ವಿ. ಸಾಲ್ಯಾನ್, ದೇವದಾಸ ಸುವರ್ಣ, ಉಂಜಿ ಬವ ಪದ್ರೆಂಗಿ, ಎನ್. ಶೇಕಬ್ಬ, ಸ್ಟಾನಿ ಡಿಕುನ್ಹಾ, ಐರಿನ್ ಡಿಕುನ್ಹಾ, ಚಂದ್ರಿಕಾ, ಅಬ್ದುಲ್ ಅಜೀಜ್, ಶೇಖರ ಅವರುಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *