- ಬಜ್ಪೆ: ತನ್ನ ವಾಹನದಲ್ಲಿ ತೆರಳಿದ್ದ ವ್ಯಕ್ತಿಯೋರ್ವರು ನಿಗೂಢವಾಗಿ ನಾಪತ್ತೆಯಾದ ಘಟನೆ ಎ.22ರಂದು ಪಡುಪೆರಾರ ಸಮೀಪದ ಕತ್ತಲ್ಸಾರ್ ಎಂಬಲ್ಲಿ ನಡೆದಿದೆ.
ಪಡುಪೆರಾರದ ನಿವಾಸಿ ಕೆವಿನ್ ಡಿ’ಮೆಲ್ಲೋ (42) ನಾಪತ್ತೆಯಾದ ವ್ಯಕ್ತಿ. ಇವರು ಎ.22ರಂದು ಕೆಲಸದ ನಿಮಿತ್ತ ತನ್ನ ಕೆಎ 19 ಎಎ 1546 ನಂಬ್ರದ ಟಾಟಾ ಏಸ್ ಟೆಂಪೋದಲ್ಲಿ ಹೊರಟಿದ್ದರು. ಆದರೆ ನಿನ್ನೆ ಅವರ ವಾಹನ ಕಾವೂರು ಜಂಕ್ಷನ್ನಲ್ಲಿ ಪತ್ತೆಯಾಗಿದ್ದು ಕೆವಿನ್ ಅವರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ಜ್ಯೋತಿ ಡಿ’ಮೆಲ್ಲೋ ಎಂಬವರು ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ
