ಕಟೀಲು: ಸಾಮಾಜಿಕ ಹಾಗೂ ಸಾಂಸ್ಕ್ರತಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದು, ಒಂದು ಮಾದರಿ ಶಿಕ್ಷಕರಾಗಿದ್ದ, ವಾಸುದೇವ ಉಡುಪರು ನಿಜಾವಾಗಿಯೂ ಅಭಿನಂಧನಾರ್ಹರು ಎಂದು ಕಟೀಲು ದೇವಳದ ಪ್ರಧಾನ ಅರ್ಚಕ ಲಕ್ಷ್ಮೀನಾರಯಣ ಅಸ್ರಣ್ಣ ಹೇಳಿದರು ಅವರು ಕಟೀಲು ದೇವಳದಲ್ಲಿ ವಾಸುದೇವ ಉಡುಪ ಜೀವನ ಚರಿತ್ರೆಯನ್ನು ಒಳಗೊಂಡ ಕೆ. ಗುರುರಾಜ್ ರಚಿತ ಎಲೆ ಮರೆಯ ಕಾಯಿ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
pustaka bidugade
ಈ ಕಾರ್ಯಕ್ರಮದಲ್ಲಿ ಕಟೀಲು ಕ್ಷೇತ್ರದ ಪ್ರಧಾನ ಅರ್ಚಕರುಗಳಾದ ಲಕ್ಷ್ಮಿ ನಾರಾಯಣ ಅಸ್ರಣ್ಣ, ವಾಸುದೇವ ಅಸ್ರಣ್ಣ, ಅನಂತ ಪದ್ಮನಾಭ ಅಸ್ರಣ್ಣ, ಹರಿ ನಾರಾಯಣ ದಾಸ ಅಸ್ರಣ್ಣ, ಸಂಸದ ನಳೀನ್ ಕುಮಾರ್ ಕಟೀಲು, ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ್ ಕಟೀಲು, ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ವಲಯದ ಯುಗಪುರುಷ ಮಾಸ ಪತ್ರಿಕೆಯ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಮೂಲ್ಕಿ ವಲಯದ ಲಯನ್ಸ್ ನ ಅಧ್ಯಕ್ಷ ದೇವ ಪ್ರಸಾದ್ ಪುನರೂರ್, ಆದರ್ಶ್ ಶೆಟ್ಟಿ ಎಕ್ಕಾರು, ರತೀಶ್ ಉಡುಪ, ಬಾಲಕೃಷ್ಣ ಉಡುಪ, ಪ್ರಮೀಳ ಉಡುಪ, ಅರುಣಾ ಉಡುಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *