ಬಜ್ಪೆ: ಇಲ್ಲಿಗೆ ಸಮೀಪದ ಕೆಂಜಾರು ಎಂಬಲ್ಲಿನ ಹೆಸರಾಂತ ಉದ್ಯಮಿಯೊಬ್ಬರ ಶವ ಬಾಳ-ತೋಕೂರು ಕೈಗಾರಿಕಾ ಪ್ರದೇಶ ಬಳಿಯ ಫಲ್ಗುಣಿ ನದಿಯ ಕವಲಿನಲ್ಲಿ ಶನಿವಾರ ಸಂಜೆ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಕೆಂಜಾರು ನಿವಾಸಿ ರಫೀಕ್(65) ಮೃತಪಟ್ಟವರು. ಕೆಂಜಾರು ಸಮೀಪ `313′ ಎಂಬ ಹೆಸರಿನ ಅಪಾರ್ಟ್‍ಮೆಂಟ್ ಮಾಲಕರಾಗಿರುವ ಇವರ ಶವ ನೀರಲ್ಲಿ ಮುಳುಗಿ ಮೃತಪಟ್ಟ ಸ್ಥಿತಿಯಲ್ಲಿ ಶನಿವಾರ ಸಂಜೆ ಪತ್ತೆಯಾಗಿದೆ. ಮೃತದೇಹವನ್ನು ಗುರುತಿಸಿದ ಸ್ಥಳೀಯರು ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಪರಿಶೀಲನೆ ನಡೆಸಿದ್ದಾರೆ.
ಯಾವುದೇ ಗಾಯದ ಗುರುತಿಲ್ಲ:
ಪೊಲೀಸರ ಮಾಹಿತಿ ಪ್ರಕಾರ ರಫೀಕ್ ದೇಹದಲ್ಲಿ ಮೇಲ್ನೋಟಕ್ಕೆ ಯಾವುದೇ ರೀತಿಯ ಗಾಯದ ಗುರುತು ಕಂಡುಬಂದಿಲ್ಲ. ಆತ್ಮಹತ್ಯೆ ಮಾ ಡಿರಬಹುದೆಂದು ಸಂಕಿಸಲಾಗಿದ್ದರು ಕೆಂಜಾರು ನಿವಾಸಿಯಾಗಿರುವ ಅವರು ಕೈಗಾರಿಕ ಪ್ರದೇಶಕ್ಕೆ ಯಾತಕ್ಕಾಗಿ ಬಂದಿದ್ದಾರೆ ಎಂಬ ಸಂಶಯ ಕಾಡುತ್ತಿದೆ. ಪೊಲೀಸರು, ಶ್ವಾನದಳ ಸ್ಥಳಕ್ಕೆ ಆಗಮಿಸಿದ್ದು ಮೃತದೇಹವನ್ನು ನಗರದ ವೆನ್ ಲಾಕ್ ಆಸ್ಪತ್ರೆಗೆ ಸಾಗಿಸಿದ್ದಾರೆ.
ರಫೀಕ್ ಎಲ್ಲರೊಂದಿಗೆ ಅನ್ಯೊನ್ಯತೆಯಿಂದ ಇದ್ದ ರಫೀಕ್ ಸಾವಿಗೆ ಕಾರಣ ಏನೆಂದು ನಿಗೂಢವಾಗಿದೆ. `313′ ಅಪಾರ್ಟ್‍ಮೆಂಟ್ ಮಾಲಕರಾಗಿರುವ ಇವರು ಕೆಂಜಾರಿನಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದರೆನ್ನಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.