ಕಿನ್ನಿಗೋಳಿ; ಕಿನ್ನಿಗೋಳಿ ಸಮೀಪದ ಗುತ್ತಕಾಡು ಎಂಬಲ್ಲಿ ದನದ ಕೊಟ್ಟಿಗೆಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಏ.16ರಂದು ನಡೆದಿದೆ.
ಗುತ್ತಕಾಡಿನ ಗಂಗು ಪೂಜಾರ್ತಿ ಎಂಬವರಿಗೆ ಸೇರಿದ ಕೊಟ್ಟಿಗೆ ಇದಾಗಿದ್ದು ಕೆಲದಿನಗಳ ಹಿಂದೆ ಕೊಟ್ಟಿಗೆಯನ್ನು ಸರಿ ಪಡಿಸಿದ್ದು ಇಂದು ಸಂಜೆ ಗಂಗು ಪೂಜಾರ್ತಿಯವರು ಮನೆಗೆ ಬರುವ ಸಂದರ್ಭದಲ್ಲಿ ಕೊಟ್ಟಿಗೆಗೆ ಆಕಸ್ಮಾತ್ ಬೆಂಕಿ ಬಿದ್ದಿತ್ತು ಕೂಡಲೇ ಸ್ಥಳಿಯರ ಸಹಕಾರದಿಂದ ಬೆಂಕಿಯನ್ನು ನಂದಿಸಿದ್ದಾರೆ ಕೊಟ್ಟಿಯ ಒಳಗೆ ಮಳೆಗಾಲಕ್ಕೆ ಸಂಗ್ರಹಿಸಿಟ್ಟ ತೆಂಗಿನ ಸಿಪ್ಪೆ ಬೈಹುಲ್ಲು ಮುಂತಾದವುಗಳು ದಾಸ್ತಾನಿದ್ದು ಬೆಂಕಿಗಾಹುತಿಯಾಗಿದೆ. ಬದಿಯಲ್ಲೇ ಇರುವ ಮನೆಗೂ ಬೆಂಕಿ ಹಬ್ಬಿದ್ದು ಕೂಡಲೇ ಸ್ಥಳೀಯರು ಇದನ್ನು ನಂದಿಸಿದ್ದಾರೆ ಸುಮರು ೫೦ ಸಾವಿರದಷ್ಟು ನಷ್ಟ ಸಂಬವಿಸಿದೆ ಎನ್ನಲಾಗಿದೆ.


