
ಸುದ್ದಿ9 ಕಿನ್ನಿಗೋಳಿ ;ಶ್ರಿ ಕ್ಷೇತ್ರ ದೇಂದಡ್ಕ ಮಹಾಲಿಂಗೇಶ್ವರ ದೇವಳಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಐದು ಲಕ್ಷ ರೂ. ಅನುದಾನವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿದರ್ೇಶಕ ಸಂಪತ್ ಕುಮಾರ್ ಹಾಗೂ ಮಂಗಳೂರು ಯೋಜನಾಧಿಕಾರಿ ರಾಘವ ಎಂ. ಅವರು ಶ್ರಿ ಕ್ಷೇತ್ರ ದೇಂದಡ್ಕ ಮಹಾಲಿಂಗೇಶ್ವರ ದೇವಳ ಜೀಣರ್ೋದ್ದಾರ ಸಮಿತಿ ಅಧ್ಯಕ್ಷ ಜಗದೀಶ ಪ್ರಭು ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಕೆ. ಭುವನಾಭಿರಾಮ ಉಡುಪ, ಶ್ರಿ ಕ್ಷೇತ್ರ ದೇಂದಡ್ಕ ಮಹಾಲಿಂಗೇಶ್ವರ ದೇವಳ ಅನುವಂಶಿಕ ಪ್ರಧಾನ ಅರ್ಚಕ ರಾಮಕೃಷ್ಣ ಭಟ್, ಅರ್ಚಕ ಸುಬ್ರಹ್ಮಣ್ಯ ಭಟ್, ಅನುವಂಶಿಕ ಮೊಕ್ತೇಸರರಾದ ವನಜಾಕ್ಷಿ ಹೆಗ್ಡೆ, ರತ್ನಾವತಿ ಎಸ್. ಶೆಟ್ಟಿ, ನಡೀಬೆಟ್ಟು ಧೂಮವತಿ ದೈವಸ್ಥಾನದ ಗುತ್ತಿನಾರ್ ಜಯರಾಮ ಶೆಟ್ಟಿ, ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್, ಧ.ಗ್ರಾ. ಯೋ. ಕಿನ್ನಿಗೋಳಿ ವಲಯ ಮೇಲ್ವಿಚಾರಕ ಸತೀಶ್ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪಧಾದಿಕಾರಿಗಳು ಉಪಸ್ಥಿತರಿದ್ದರು.
