
ಸುದ್ದಿ 9 ಕಿನ್ನಿಗೋಳಿ; ಹೊಸಕಾಡು ನಾಗಬ್ರಹ್ಮ ಭಜನಾ ಮಂಡಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಒಂದು ಲಕ್ಷ ರೂ. ಅನುದಾನವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿದರ್ೇಶಕ ಸಂಪತ್ ಕುಮಾರ್ ಹಾಗೂ ಮಂಗಳೂರು ಯೋಜನಾಧಿಕಾರಿ ರಾಘವ ಎಂ. ಅವರು ನಾಗಬ್ರಹ್ಮ ಭಜನಾ ಮಂಡಳಿ ಅಧ್ಯಕ್ಷ ಹರೀಶ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಕೆ. ಭುವನಾಭಿರಾಮ ಉಡುಪ, ಸದಸ್ಯ ಧನಂಜಯ ಶೆಟ್ಟಿಗಾರ್, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಶಶಿ ಸುರೇಶ್, ಧ.ಗ್ರಾ. ಯೋ. ಮೇಲ್ವಿಚಾರಕ ಸತೀಶ್, ಸೇವಾ ಪ್ರತಿನಿಧಿ ಬಬಿತಾ ಸುವರ್ಣ, ಮತ್ತಿತರರು ಉಪಸ್ಥಿತರಿದ್ದರು.
