ಅಹಮದಾಬಾದ್ನಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಮೋದಿ ಜೊತೆ ಸಲ್ಮಾನ್ ಖಾನ್
ಅಹಮದಾಬಾದ್(jan14): ಬಿಜೆಪಿ ಪ್ರಧಾನಿ ಅಭ್ಯಥರ್ಿ ನರೇಂದ್ರ ಮೋದಿಯವರು ದೇಶದ ಪ್ರಗತಿಯನ್ನು ಉತ್ತುಂಗತೆಗೆ ಒಯ್ಯಲು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ನರೇಂದ್ರ ಮೋದಿಯವರನ್ನು ಹೊಗಳಿದರು. ಅಲ್ಲದೆ ಗುಜರಾತ್ ಅಭಿವೃದ್ಧಿಯನ್ನು ಹೊಗಳಿದ ಖಾನ್ ಮೋದಿ ದೇಶದ ಪ್ರಧಾನಿಯಾಗಲು ಅರ್ಹರೆಂದು ತಿಳಿಸಿದರು.
ಅಹಮದಾಬಾದ್ನ ಗಾಳಿಪಟ ಉತ್ಸವದಲ್ಲಿ ಮೋದಿ ಜೊತೆ ಕಾಣಿಸಿಕೊಂಡ ಖಾನ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಗುಜರಾತ್ ಅಭಿವೃದ್ಧಿಯನ್ನು ಕಂಡು ಪ್ರಭಾವಿತನಾಗಿದ್ದೇನೆ, ವ್ಯಕ್ತಿ ಯೆಂದರೆ ಮೋದಿಯಂತಿರಬೇಕು, ದೇಶದ ಪ್ರಧಾನಿಯಾಗಲು ಮೋದಿ ಅತೀ ಸೂಕ್ತ ವ್ಯಕ್ತಿ. ಅಂಥವರು ನನ್ನ ಪಕ್ಕದಲ್ಲೇ ನಿಂತಿದ್ದಾರೆ ಎಂದುಹೇಳಿದರು.
ನಿಮ್ಮ ಪ್ರಕಾರ ಉತ್ತಮ ವ್ಯಕ್ತಿ ಯಾರು ಎಂದು ಕೇಳಿದಾಗ ಉತ್ತರ ಹೇಳಲು ನಿರಾಕರಿಸಿದ ಸಲ್ಮಾನ್ ಉತ್ತಮ ವ್ಯಕ್ತಿ ಯಾರೆಂಬುವುದನ್ನು ದೇವರೇ ನಿರ್ಧರಿಸಿದ್ದಾರೆ ಎಂದುತ್ತರಿಸಿದರು.
ಜನವರಿ 24ರಂದು ಬಿಡುಗಡೆಯಾಗಲಿರುವ ತನ್ನ ಹೊಸ ಸಿನಿಮಾ ಜೈ ಹೋ ಚಿತ್ರದ ಪ್ರಚಾರಕ್ಕಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅಹಮದಾಬಾದ್ಗೆ ಬಂದಿದ್ದರು. ಈ ಸಂದರ್ಭದಲ್ಲಿ ಖಾನ್ ಮೋದಿಯವರನ್ನು ಹೊಗಳಿದ್ದರು
