ಬುಧವಾರ ಬೆಳಿಗ್ಗೆ ಕಿನ್ನಿಗೋಳಿ ಬಸ್ ನಿಲ್ದಾಣದ ಸಮೀಪ ಬಸ್ ಚಾಲಕನಿಗೆ ಕಿನ್ನಿಗೋಳಿ ವಲಯ ಬಸ್ ಮಾಲಕರ ಸಂಘದ ಅಧ್ಯಕ್ಷರು ಹಲ್ಲೆ ನಡೆಸಿದ್ದರಿಂದ ಇತರ ಬಸ್ ಚಾಲಕರು ಹಠಾತ್ತಾಗಿ ಬಸ್ಸುಗಳ ಸಂಚಾರ ರದ್ದು ಪಡಿಸಿದ ಘಟನೆ ನಡೆದಿದೆ.
ಮಂಗಳೂರಿನಿಂದ ಕಾವೂರು ಮರವೂರು ಕಿನ್ನಿಗೋಳಿಗೆ ಸಂಚರಿಸುತ್ತಿದ್ದ ಆದಿಜನಾರ್ಧನ ಟ್ರಾವೆಲ್ಸ್ನ ಬಸ್ ಚಾಲಕ ಉಲ್ಲಂಜೆ ನಿವಾಸಿ ಹಸನ್ ಎಂಬ ಚಾಲಕ ಹಲ್ಲೆಗೊಳಗಾಗಿದ್ದು. ಲಕ್ಷ್ಮೀ ಜನಾರ್ಧನ ಟ್ರಾವಲ್ಸ್ನ ಮಾಲಕ ಹಾಗೂ ಕಿನ್ನಿಗೋಳಿ ವಲಯದ ಬಸ್ ಚಾಲಕ ಮಾಲಕರ ಸಂಘದ ಅಧ್ಯಕ್ಷ ದುಗರ್ಾ ಪ್ರಸಾದ್ ಹೆಗ್ಡೆ ಚಾಲಕನ ಮೇಲೆ ಹಲ್ಲೆ ನಡೆಸಿದರು ಎಂದು ಆರೋಪಿಸಲಾಗಿದೆ.
ಈ ಎರಡೂ ಬಸ್ಸಿಗೂ ಟೈಮಿಂಗ್ ವಿಷಯದಲ್ಲಿ ಮೊದಲಿನಿಂದಲೂ ಪರಸ್ಪರ ಮನಸ್ತಾಪವಿದ್ದದೇ ಹಲ್ಲೆಗೆ ಪ್ರಮುಖ ಕಾರಣ ಎನ್ನಲಾಗಿದ್ದು ಬುಧವಾರ ಬೆಳಿಗ್ಗೆ ಬಸ್ ನಿಲ್ದಾಣದ ಒಳಗೆ ಬಸ್ ಪ್ರವೇಶಿಸುವಾಗ ತನ್ನ ದ್ವಿ ಚಕ್ರವಾಹನದಲ್ಲಿ ದುಗರ್ಾ ಪ್ರಸಾದ್ ಹೆಗ್ಡೆ ಬಸ್ ಅಡ್ಡಗಟ್ಟಿದಾಗ ಬೈಕಿಗೆ ಸವರಿತು ಎನ್ನಲಾಗಿದ್ದು ಕೋಪಗೊಂಡ ಅವರು ಬಸ್ಸಿನ ಚಾಲಕನ ಮೇಲೆ ಹಲ್ಲೆ ನಡೆಸಿದರು ಎಂದು ಚಾಲಕ ಹಸನ್ ಪೊಲೀಸರಲ್ಲಿ ದೂರಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಲ್ಲೆಯಿಂದ ಇತರ ಬಸ್ ಚಾಲಕರು ಆಕ್ರೋಶಗೊಂಡು ತಮ್ಮ ತಮ್ಮ ಬಸ್ಸುಗಳನ್ನು ಸ್ಥಳದಲ್ಲಿಯೇ ನಿಲ್ಲಿಸಿ ಬಸ್ ಚಾಲಕರ ನಿವರ್ಾಹಕರ ಸಂಘದ ಅಧ್ಯಕ್ಷ ಭಾಸ್ಕರ ಅಮೀನ್ ಸಹಿತ ಚಾಲಕರು, ನಿವರ್ಾಹಕರು ಘಟನೆಯನ್ನು ತೀವ್ರವಾಗಿ ಖಂಡಿಸಿ ಸಂಪೂರ್ಣವಾಗಿ ಬಸ್ಸುಗಳನ್ನು ಬಂದ್ ಮಾಡಿ ಮುಷ್ಕರ ನಡೆಸಿದರು. ಈ ಸಂದರ್ಭದಲ್ಲಿ ಬಸ್ ನಿಲ್ದಾಣದಲ್ಲಿ ಜನಸಾಗರೇ ಸೇರಿದಾಗ ಘಟನಾ ಸ್ಥಳಕ್ಕೆ ಮೂಲ್ಕಿ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು
ಹಲ್ಲೆಯ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದ ಸಾರ್ವಜನಿಕರು ಚಾಲಕ ನಿವರ್ಾಹಕರ ಪ್ರಸಾಂಗವದನೆಯಿಂದ ಬಸ್ ನಿಯಂತ್ರಣಕ್ಕೆ ಬಂದಿತಲ್ಲದೇ ಒಂದು ವೇಳೆ ಬಸ್ ವೇಗದಲ್ಲಿದ್ದರೆ ಅಕ್ಕ ಪಕ್ಕದ ಅಂಗಡಿಗಳಿಗೆ ನುಗ್ಗಿ ಸಾಕಷ್ಟು ಸಾವು ನೋವು ಸಂಭವಿಸುತ್ತಿತ್ತು ಎಂದು ಪೊಲೀಸರಲ್ಲಿ ದೂರಿಕೊಂಡರು.

12KinniBus07

12KinniBus09

12KinniBus06
ಚಾಲಕರ ಹಾಗೂ ಮಾಲಕರ ಸಭೆ ನಡೆದು ಹಲ್ಲೆ ನಡೆಸಿದ ಮಾಲಕ ದುಗರ್ಾಪ್ರಸಾದ ಹೆಗ್ಡೆ ಸಭೆಯಲ್ಲಿ ಕ್ಷಮೆ ಯಾಚಿಸಿರುವುದರೊಂದಿಗೆ ಸೌಹಾದ್ರ್ಯಯುತವಾಗಿ ಸಮಸ್ಯೆಯನ್ನು ಬಗೆ ಹರಿಸಲಾಯಿತು
ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಬಸ್ ಬಂದ್ ನಡೆಯಿತು. ಬಸ್ಗಾಗಿ ಸಾಕಷ್ಟು ಪ್ರಯಾಣಿಕರು ಕಾಯುತ್ತಿದ್ದವರು ಏಕಾಏಕಿ ಬಸ್ ಸಂಚಾರ ಬಂದ್ ನಿಂದಾಗಿ ಪರದಾಡುವ ಪರಿಸ್ಥಿತಿ ಉಂಟಾಗಿ ರಿಕ್ಷಾ, ಕಾರುಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಒದಗಿ ಬಂದಿತು. ರಾಜ್ಯದಲ್ಲಿಯೇ ದ್ವಿತೀಯ ಪಿಯುಸಿ ಪರೀಕ್ಷೆಯು ಬುಧವಾರದಿಂದ ನಡೆಯುತ್ತಿದ್ದು ಕಿನ್ನಿಗೋಳಿ ಪರಿಸರದ ಕಾಲೇಜಿನಲ್ಲಿಯೂ ಈ ಪರೀಕ್ಷೆಗಾಗಿ ವಿದ್ಯಾಥರ್ಿಗಳು ಬಸ್ಸುಗಳನ್ನೇ ಆಶ್ರಯಿಸಿದ್ದು ಒಂದು ವೇಳೆ ಈ ಘಟನೆ ಒಂದು ಗಂಟೆ ಮುಂಚೆ ನಡೆದಿದ್ದಲ್ಲಿ ವಿದ್ಯಾಥರ್ಿಗಳ ಶಿಕ್ಷಣ ಭವಿಷ್ಯಕ್ಕೆ ಅಪಾಯ ತಂದೊಡ್ಡುವ ಪರಿಸ್ಥಿತಿ ನಿಮರ್ಾಣವಾಗುತ್ತಿತ್ತು.

By suddi9

Leave a Reply

Your email address will not be published. Required fields are marked *