ಕಿನ್ನಿಗೋಳಿ ಮಠ, ಮಂದಿರಗಳು ತುಳುನಾಡಿನ ಸಂಸ್ಕೃತಿಯ ಪ್ರತೀಕ, ಉತ್ತಮ ಸಂಸ್ಕಾರ ಹಾಗೂ ಧರ್ಮ ಜಾಗೃತಿಯಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ಸೌಹಾರ್ದದ ವಾತಾವರಣ ನಿಮರ್ಾಣಗೊಳ್ಳುತ್ತದೆ ಎಂದು ಕಟೀಲು ದೇವಳ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ತಾಳಿಪಾಡಿ, ಶಾಂತಿನಗರ ಶ್ರೀ ಮೂಕಾಂಬಿಕಾ ದೇವಳದ 33 ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಅಂಗವಾಗಿ ಗುರುವಾರ ನಡೆದ ಧಾಮರ್ಿಕ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭ ರ್ಯಾಜ್ಯೋತ್ಸವ ಪ್ರಶಸ್ತಿ ವಿಜೇತ ಪಯ್ಯೊಟ್ಟು ಸದಾಶಿವ ಸಾಲ್ಯಾನ್, ನಾಟಕಕಾರ ರಂಗಕಮರ್ಿ ಕಾಪು ಲೀಲಾಧರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಮೂಕಾಂಬಿಕಾ ದೇವಳ ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು.
ಎಳತ್ತೂರು ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಉದ್ಯಮಿ ರಾಕಿ ಪಿಂಟೋ, ತಾಳಿಪಾಡಿ ಧರ್ಮಪರಿಪಾಲನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಡಿ. ಸಾಲ್ಯಾನ್, ತಾಳಿಪಾಡಿಗುತ್ತು ದಿನೇಶ್ ಶೆಟ್ಟಿ, ಚಿತ್ರಾ ಶೆಟ್ಟಿ, ಯಶೋದ, ಶಾರದಾ, ಕೇಶವ ದೇವಾಡಿಗ, ಗುತ್ತಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ ಉಪಸ್ಥಿತರಿದ್ದರು.
ಶ್ರೀ ಮೂಕಾಂಬಿಕಾ ದೇವಳದ ಧರ್ಮದಶರ್ಿ ವಿವೇಕಾನಂದ ಪ್ರಸ್ತಾವನೆಗೈದರು. ರಾಮ ಕೆ. ಸ್ವಾಗತಿಸಿ ಶಶಿಕಾಂತ್ ರಾವ್ ವಂದಿಸಿದರು. ದಿವಾಕರ ಕಕರ್ೇರಾ ಕಾರ್ಯಕ್ರಮ ನಿರೂಪಿಸಿದರು.
ರ್ಯಾಜ್ಯೋತ್ಸವ ಪ್ರಶಸ್ತಿ ವಿಜೇತ ಪಯ್ಯೊಟ್ಟು ಸದಾಶಿವ ಸಾಲ್ಯಾನ್ ಶ್ರೀ ಮೂಕಾಂಬಿಕಾ ದೇವಳದ ವತಿಯಿಂದ ಸನ್ಮಾನಿಸಲಾಯಿತು.
