ಸುದ್ದಿ9 ಕಿನ್ನಿಗೋಳಿ ;ಮಹಿಳೆ ಸಶಕ್ತರಾದಲ್ಲಿ ದೇಶದ ಅಭಿವೃದ್ಧಿ ಸಾಧ್ಯ. ಮಾತೃಪ್ರೇಮದಿಂದಾಗಿ ಸಂಸಾರ ಹಾಗೂ ಸಮಾಜವನ್ನು ಏಕಸ್ವಾಮ್ಯತೆಯಿಂದ ಕಾಣುತ್ತಾಳೆ. ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
ಕನ್ಸೆಟ್ಟಾ ಆಸ್ಪತ್ರೆ ಕಿನ್ನಿಗೋಳಿ ಮತ್ತು ಸಂಜೀವಿನಿ ಸಮಗ್ರ ಸಮುದಾಯ ಆರೋಗ್ಯ ಕೇಂದ್ರದ ಕಿನ್ನಿಗೋಳಿ ಜಂಟಿ ಆಶ್ರಯದಲ್ಲಿ ಕನ್ಸೆಟ್ಟಾ ಆಸ್ಪತ್ರೆ ವಠಾರದಲ್ಲಿ ಶನಿವಾರ ನಡೆದ ವಿಶ್ವ ಮಹಿಳಾ ದಿನಾಚರಣೆ ಮತ್ತು ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

8KinniConcettaಕಿನ್ನಿಗೋಳಿ ಚಚ್ರ್ ಧರ್ಮಗುರು ಫಾ| ಆಲ್ಫ್ರೆಡ್ ಜೆ. ಪಿಂಟೊ ಆಶೀರ್ವಚನಗೈದರು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕ್ಷಯ ನಿಯಂತ್ರಣಾಧಿಕಾರಿ ರಾಮಕೃಷ್ಣ ರಾವ್ ಸಂಪನ್ಮೂಲ ವ್ಯಕ್ತಿಯಾಗಿ “ವಿಶೇಷ ಅದ್ಯತೆವುಳ್ಳವರು ಸ್ವಾವಲಂಬಿ ಜೀವನದ ಅರಿವು ಕುರಿತು ಮಾಹಿತಿ ನೀಡಿದರು. ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಸೂರಲ್ ಪಾಡಿ ಶುಭದಾ ಸಮಾಜ ಸೇವಾ ಸಂಚಾಲಕಿ ಭಗಿನಿ ಅನಿತಾ ಫ್ರಾಂಕ್, ಮೇರಿವೆಲ್ ಕಾನ್ವೆಂಟ್ ಮುಖ್ಯಸ್ಥೆ ಭಗಿನಿ ವಿತಾಲಿಸ್ ಉಪಸ್ಥಿತರಿದ್ದರು. ಕನ್ಸೆಟ್ಟಾ ಆಸ್ಪತ್ರೆ ನಿದರ್ೇಶಕಿ ಭಗಿನಿ ಡಾ| ಜೀವಿತಾ ಪ್ರಸ್ತಾವನೆಗೈದು ಸ್ವಾಗತಿಸಿದರು. ಕಿನ್ನಿಗೋಳಿ ಸಂಜೀವಿನಿ ಸಂಸ್ಥೆ ಸಂಚಾಲಕಿ ಭಗಿನಿ ಹೋಪ್ ವಂದಿಸಿದರು. ಶೈಲಾ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *