ವಾಷಿಂಗ್ಟನ್: ಅಮೆರಿಕದ ಕೊಲರಾಡೊದಲ್ಲಿ ಬಂಧಿಯಾಗಿರುವ ಅಲ್ ಕಾಯಿದಾ ಉಗ್ರ ಫ್ರೆಂಚ್ ಪ್ರಜೆ ಜಕಾರಿಯಸ್ ಮುಸೋವಿ  ಪ್ರಕರಣವೊಂದರ ವಿಚಾರಣೆಯ ವೇಳೆ ಅಮೆರಿಕದಲ್ಲಿ ನಡೆದ 9/11ರ ಭಯೋತ್ಪಾದಕ ದಾಳಿಯಲ್ಲಿ ಸೌದಿ ಅರೇಬಿಯಾದ ರಾಜ ಮನೆತನ ಶಾಮೀಲಾಗಿತ್ತು ಎಂಬ ನ್ಪೋಟಕ ಮಾಹಿತಿಯೊಂದನ್ನು ಹೊರಗೆಡಹಿದ್ದಾನೆ. ಅಲ್ಲದೆ ವಾಷಿಂಗ್ಟನ್‍ನಲ್ಲಿರುವ ಸೌದಿಯ ರಾಯಭಾರಿ ಕಚೇರಿಗೆ ತಾನು ಭೇಟಿ ನೀಡಿ ಅಮೆರಿಕದ ಅಧ್ಯಕ್ಷರ ವಿಮಾನವಾದ ಏರ್ ಫೋರ್ಸ್ ವನ್‍ನ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಕುರಿತಂತೆ ಚರ್ಚೆ ನಡೆಸಿದ್ದೆ ಎಂದೂ ಆತ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗಿದೆ.

atta

September 11 Retrospective

ಅಲ್ ಕಾಯಿದಾ ಸಂಘಟನೆಗೆ ಹಣಕಾಸು ಮತ್ತು ಇತರೆ ನೆರವು ನೀಡುತ್ತಿರುವ ದಾನಿಗಳ ಹೆಸರುಗಳನ್ನು ಒಳಗೊಂಡ ಡಿಜಿಟಲ್ ಪಟ್ಟಿಯನ್ನು ತಯಾರಿಸುವ ಹೊಣೆಯನ್ನೂ ಸಂಘಟನೆ ತನಗೆ ವಹಿಸಿತ್ತು. ಟರ್ಕಿಯ ರಾಜಕುಮಾರ ಅಲ್-ಫೈಸಲ್ -ಅಲ್ ಸೌದ್, ಸೌದಿ ಅರೇಬಿಯಾದ ವಿದೇಶ ಗುಪ್ತಚರ ಸೇವೆಗಳ ಮಾಜಿ ಮಹಾ ನಿರ್ದೇಶಕ, ಅಮೆರಿಕದ ರಾಯಭಾರಿ ಸಂಘಟನೆಗೆ ನೆರವಾಗಿದ್ದರು. ಸೌದಿಯ ರಾಜಮನೆತನದ ಇತರೆ ಸದಸ್ಯರನ್ನು ತನಗೆ ಅಮೆರಿಕದಲ್ಲಿನ ಸೌದಿ ರಾಯಭಾರಿ ತನಗೆ ಪರಿಚಯಿಸಿದ್ದರು ಎಂದು ಆತ ತಿಳಿಸಿರುವುದಾಗಿ ಸಿಎನ್‍ಎನ್ ವರದಿ ಮಾಡಿದೆ.

ಅಮೆರಿಕದ ಸೀಲ್ ಪಡೆಗಳಿಂದ ಹತ್ಯೆಗೀಡಾದ ಅಲ್ ಕಾಯಿದಾ ವರಿಷ್ಠ ಒಸಾಮಾ ಬಿನ್ ಲಾದನ್ ಮತ್ತು ಸೌದಿ ಅರೇಬಿಯಾದ ರಾಜ ಮನೆತನದ ನಡುವಣ ಕೊಂಡಿಯಾಗಿ ತಾನು ಕಾರ್ಯನಿರ್ವಹಿಸುತ್ತಿದ್ದುದಾಗಿ ತಿಳಿಸಿರುವ ಜಕಾರಿಯಸ್ ಮುಸೋವಿ, ಲಾದನ್ ಮತ್ತು ರಾಜಮನೆತನದ ನಡುವೆ ಹಲವಾರು ಪತ್ರಗಳನ್ನು ವಿನಿಮಯಿಸಿದ್ದೆ ಎಂದು ಹೇಳಿಕೊಂಡಿದ್ದಾನೆ.

ಆರೋಪ ನಿರಾಕರಿಸಿದ ಸೌದಿ: ಅಲ್ ಕಾಯಿದಾ ಉಗ್ರ ಜಕಾರಿಯಸ್ ಮುಸೋವಿ ರಾಜ ಮನೆತನದ ವಿರುದ್ಧ ಮಾಡಿರುವ ಆರೋಪವನ್ನು ಸೌದಿ ಅರೇಬಿಯಾ ತಳ್ಳಿ ಹಾಕಿದೆ.ಜಕಾರಿಯಸ್ ಮುಸೋವಿ ಓರ್ವ ಬುದ್ಧಿಗೇಡಿ ಉಗ್ರನಾಗಿದ್ದು ಸ್ವತಃ ಆತನ ವಕೀಲರೇ ಮುಸೋವಿ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿರುವುದಾಗಿ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *